Dwarakish: ಸಿಂಗಾಪುರದಲ್ಲಿ ರಾಜ ಕುಳ್ಳ, ಆಫ್ರಿಕಾದಲ್ಲಿ ಶೀಲಾ, ಕನ್ನಡ ಚಿತ್ರರಂಗಕ್ಕೆ ವಿದೇಶಿ ಲೊಕೇಶನ್ ಪರಿಚಯಿಸಿದ್ದ ದ್ವಾರಕೀಶ್  

Dwarakish death: ಸ್ಯಾಂಡಲ್ವುಡ್ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ   ದ್ವಾರಕೀಶ್ (81) ಹೃದಯಾಘಾತದಿಂದ  ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಡಾ. ವಿಷ್ಣುವರ್ಧನ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದ ದ್ವಾರಕೀಶ್ ಕನ್ನಡ ಚಿತ್ರರಂಗದ ಖ್ಯಾತ ನಟರ ಚಿತ್ರಗಳನ್ನೂ ನಿರ್ಮಿಸಿ ಸೈ ಎಣಿಸಿಕೊಂಡಿದ್ದಾರೆ. ಸ್ಟುಡಿಯೋಗಳಲ್ಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡುತ್ತಿದ್ದ ಒಂದು ಕಾಲದಲ್ಲಿ ದ್ವಾರಕೀಶ್ ಅವರು ಮೊದಲ ಬಾರಿಗೆ  ಸಿಂಗಾಪುರದಲ್ಲಿ ರಾಜ ಕುಳ್ಳ ಸಿನಿಮಾವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದರು. 

Dwarakish: ಸಿಂಗಾಪುರದಲ್ಲಿ ರಾಜ ಕುಳ್ಳ, ಆಫ್ರಿಕಾದಲ್ಲಿ ಶೀಲಾ, ಕನ್ನಡ ಚಿತ್ರರಂಗಕ್ಕೆ ವಿದೇಶಿ ಲೊಕೇಶನ್ ಪರಿಚಯಿಸಿದ್ದ ದ್ವಾರಕೀಶ್  
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 16, 2024 | 3:14 PM

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ. ವಯೋ ಸಹಜ ಕಾಯಿಯಿಂದ ಬಳಲುತ್ತಿದ್ದ ಲೆಜೆಂಡ್ ನಟ ಇಂದು ಬೆಳಗ್ಗೆ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಮೂಡಿಸಿದ್ದ ದ್ವಾರಕೀಶ್ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುವ ಕರ್ನಾಟಕದ ಕುಳ್ಳ ಮೊದಲ ಬಾರಿಗೆ ಸಿಂಗಾಪೂರದಲ್ಲಿ ರಾಜ ಕುಳ್ಳ  ಸಿನಿಮಾವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಿದರು. ಈ ಚಲನಚಿತ್ರ ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1942  ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ ನಟ ದ್ವಾರಕೀಶ್ 1964 ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಟನೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ದ್ವಾರಕೀಶ್ ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟರಾಗಿ ನೂರಾರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

ಒಂದು ಕಾಲದಲ್ಲಿ  ಕನ್ನಡ ಚಲನಚಿತ್ರಗಳನ್ನು  ಸ್ಟುಡಿಯೋಗಳಲ್ಲಿ, ದೇಶದ ಒಳಗೆ ವಿವಿಧ ರಾಜ್ಯಗಳಲ್ಲಿ ಹೊರಾಂಗಣ ಚಿತ್ರೀಕರಣ ಮಾಡಲಾಗುತ್ತಿತ್ತು. ಕನ್ನಡ ಸಿನೆಮಾವನ್ನು ಬೇರೆ ದೇಶಕ್ಕೆ ಹೋಗಿ ಚಿತ್ರೀಕರಿಸುವ ಸಾಹಸವನ್ನು ಯಾರೂ ಮಾಡಿರಲಿಲ್ಲ. ಆದರೆ ಇಂಥಹದೊಂದು ಹೊಸ ಸಾಹಸ ಮಾಡಿ ದಾಖಲೆ ಬರೆದಿದ್ದು ʼಸಿಂಗಾಪುರದಲ್ಲಿ ರಾಜ ಕುಳ್ಳʼ ಸಿನೆಮಾ. 1978 ರಲ್ಲಿ  ಈ ಚಿತ್ರವು ಸಿಂಗಾಪುರದಲ್ಲಿ ಚಿತ್ರೀಕರಣಗೊಂಡಿತ್ತು. ಈ ಸಾಹಸಕ್ಕೆ ಕೈ ಹಾಕಿದ್ದು, ನಟ, ನಿರ್ಮಾಪಕ ದ್ವಾರಕೀಶ್ ಅವರು. ಸಂಪೂರ್ಣ ಆಕ್ಷನ್ ಸಸ್ಪೆನ್ಸ್ ಡ್ರಾಮಾ ಕಥೆಯನ್ನು ಹೊಂದಿದ್ದ ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.  ಇದು ಅಂದಿನ ಕಾಲದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದ್ದು, ಈ ಸಿನಿಮಾ ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಹಾಸ್ಯಮಯ ಪಾತ್ರಗಳಲ್ಲಿ ಸಿನಿರಸಿಕರ ಮನಸ್ಸು ಗೆದ್ದಿದ್ದ ಪ್ರಪಂಡ ಕುಳ್ಳನ ಸಿನಿಮಾಗಳಿವು!

ನಂತರ 1986 ರಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿದ್ದ ಆಫ್ರಿಕಾದಲ್ಲಿ ಶೀಲಾ ಸಿನಿಮಾವನ್ನು ದ್ವಾರಕೀಶ್ ಅವರು ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ಮಾಡಿದ್ದರು. ಹೀಗೆ  ಮೇಯರ್ ಮುತ್ತಣ್ಣ, ಭಾಗ್ಯವಂತರು, ಗುರುಶಿಷ್ಯರು ಸೇರಿದಂತೆ  ತಮ್ಮ ಹಿಟ್ ಸಿನಿಮಾಗಳ ಮೂಲಕ ದ್ವಾರಕೀಶ್ ಅವರು ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:02 pm, Tue, 16 April 24