Dy CM takes on BJP MLAs: ಬೆಂಗಳೂರು ಶಾಸಕ ಮತ್ತು ಸಂಸದರ ಸಭೆಗೆ ಹಾಜರಾಗದೆ ವಾಪಸ್ಸು ಹೋದವರನ್ನು ಮಾತಿನಲ್ಲಿ ತಿವಿದ ಡಿಕೆ ಶಿವಕುಮಾರ್

Updated on: Jun 05, 2023 | 5:05 PM

ಅಷ್ಟಾಗಿಯೂ ಅವರು ರಾಜಕಾರಣವೇ ಮಾಡಲೂ ಮುಂದಾದರೆ ಅದಕ್ಕೆ ತಮ್ಮದೇನೂ ಅಭ್ಯಂತರಲಿಲ್ಲ ಎಂದು ಶಿವಕುಮಾರದ ಖಾರವಾಗಿ ಹೇಳಿದರು.

ಬೆಂಗಳೂರು: ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ಕಳೆದುಹೋಗಿರುವ ಘನತೆಯನ್ನು ಪುನರ್ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ (Bengaluru Development) ಸಚಿವ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ವಿಧಾನ ಸೌಧದಲ್ಲಿ ಇಂದು ಬೆಂಗಳೂರು ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಶಿವಕುಮಾರ್, ಸಭೆಗೆ ಹಾಜರಾಗದೆ ವಾಪಸ್ಸು ಹೋದ ಕೆಲ ಬಿಜೆಪಿ ಶಾಸಕರನ್ನು (BJP MLAs) ಮಾತಿನಲ್ಲಿ ತಿವಿದರು. ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ಸು ಬರುವಾಗ ಸ್ವಲ್ಪ ತಡವಾಯಿತು, ಅದೇ ಕಾರಣಕ್ಕೆ ಕೆಲ ಶಾಸಕರು ಎದ್ದು ಹೋಗಿದ್ದಾರೆ, ರಾಜಕಾರಣ ಮಾಡುವುದನ್ನು ನಿಲ್ಲಿಸಿ, ರಾಜ್ಯದ ಜನರ ಬದುಕನ್ನು ಹಸನುಗೊಳಿಸಲು ಪ್ರಯತ್ನಿಸೋಣ, ಅಷ್ಟಾಗಿಯೂ ಅವರು ರಾಜಕಾರಣವೇ ಮಾಡಲೂ ಮುಂದಾದರೆ ಅದಕ್ಕೆ ತಮ್ಮದೇನೂ ಅಭ್ಯಂತರಲಿಲ್ಲ ಎಂದು ಶಿವಕುಮಾರದ ಖಾರವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ