AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸಿಟಿ ರೌಂಡ್ಸ್​ ನಡೆಸಿದ ಡಿಸಿಎಂ: ಯಾವೆಲ್ಲ ಕಾಮಗಾರಿ ವೀಕ್ಷಣೆ?

ಬೆಂಗಳೂರು ಸಿಟಿ ರೌಂಡ್ಸ್​ ನಡೆಸಿದ ಡಿಸಿಎಂ: ಯಾವೆಲ್ಲ ಕಾಮಗಾರಿ ವೀಕ್ಷಣೆ?

ಪ್ರಸನ್ನ ಹೆಗಡೆ
|

Updated on:Sep 30, 2025 | 8:07 PM

Share

ಸಿಎಂ ಸಿದ್ದರಾಮಯ್ಯ ಬಳಿಕ ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಲ್ಲಿ ಸಿಟಿ ರೌಂಡ್ಸ್​ ನಡೆಸಿದ್ದಾರೆ. ವಿವಿಧ ರಸ್ತೆ ಕಾಮಗಾರಿಗಳನ್ನ ಪರಿಶೀಲಿಸಿದ ಅವರು, ನಾನು ಎಲ್ಲರಿಗೂ ಟಾಸ್ಕ್‌ ಕೊಟ್ಟಿದ್ದೆ, ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಗುಂಡಿ ಮುಚ್ಚಲು ಅ.30ರವರೆಗೆ ಡೆಡ್​ ಲೈನ್​ ಕೊಟ್ಟಿದ್ದೇವೆ ಎಂದು ಡಿಸಿಎಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​ 30: ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ಬೆಂಗಳೂರಲ್ಲಿ ಸಿಟಿ ರೌಂಡ್ಸ್​ ನಡೆಸಿದ್ದಾರೆ. ಚಾಲುಕ್ಯ ಸರ್ಕಲ್​ನಲ್ಲಿ ರಸ್ತೆ ನಿರ್ಮಾಣ ಮಾಡಿದ ಜಾಗ ಪರಿಶೀಲಿಸಿದ ಡಿಸಿಎಂ,  ಅಧಿಕಾರಿಗಳಿಂದ ಕಾಮಗಾರಿ ಕುರಿತು ಮಾಹಿತಿ ಪಡೆದಿದ್ದಾರೆ. ಆ ಬಳಿಕ ಮಿನ್ಸ್ಕ್ ಸ್ಕ್ವೇರ್ ರಸ್ತೆಯನ್ನೂ ಉಪಮುಖ್ಯಮಂತ್ರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಮಾತನಾಡಿದ ಡಿಕೆಶಿ,  ನಾನು ಎಲ್ಲರಿಗೂ ಟಾಸ್ಕ್‌ ಕೊಟ್ಟಂತೆ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಗುಂಡಿ ಮುಚ್ಚಲು ಅ.30ರವರೆಗೆ ಡೆಡ್​ ಲೈನ್​ ಕೊಟ್ಟಿದ್ದೇವೆ. ಅದಕ್ಕಾಗಿ ದುಡ್ಡು ಎಷ್ಟು ಬೇಕಿದ್ರೂ ಕೊಡುತ್ತೇವೆಂದು ತಿಳಿಸಲಾಗಿದೆ ಅಂತಲೂ ಡಿಸಿಎಂ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Sep 30, 2025 08:06 PM