ಈದ್ಗಾ ಮೈದಾನ ಪಾಕಿಸ್ತಾನ, ಅಘ್ಗಾನಿಸ್ತಾನದಲ್ಲಿಲ್ಲ; ನಾವಲ್ಲಿ ಗಣೇಶನನ್ನ ಕೂರಿಸ್ತೀವಿ -ಪ್ರಮೋದ್ ಮುತಾಲಿಕ್

| Updated By: ಆಯೇಷಾ ಬಾನು

Updated on: Aug 17, 2023 | 2:25 PM

ಶಾಸ್ತ್ರೋತ್ತವಾಗಿ ಎಷ್ಟು ದಿನ ಗಣೇಶ ಕೂರಿಸಲಾಗುತ್ತೋ ಅಷ್ಟು ದಿನ ಸರ್ಕಾರ ರಕ್ಷಣೆ ಕೊಡಬೇಕು. ಈದ್ಗಾ ಮೈದಾನ, ಪಾಕಿಸ್ತಾನದಲ್ಲಿಲ್ಲ, ಅಘ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿಲ್ಲ ಭಾರತದಲ್ಲಿದೆ. ಗಣೇಶ ಕೂರಿಸಲು ಯಾರು ವಿರೋಧ ಮಾಡ್ತಾರೆ ನೋಡೋಣಾ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.

ಹುಬ್ಬಳ್ಳಿ, ಆ.17: ಹುಬ್ಬಳ್ಳಿಯಲ್ಲಿ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿ ನಡೆಸಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸ್ತೀವಿ ಎಂದು ತಿಳಿಸಿದ್ದಾರೆ. ಶಾಸ್ತ್ರೋತ್ತವಾಗಿ ಎಷ್ಟು ದಿನ ಗಣೇಶ ಕೂರಿಸಬೇಕು ಅಂತ ಇದೆಯೋ ಅಷ್ಟು ದಿನ ಕೂರಿಸುತ್ತೇವೆ. ಈ ಬಗ್ಗೆ ನಾಳೆನೇ ಪಾಲಿಕೆಗೆ ಮನವಿ ಸಲ್ಲಿಸುತ್ತೇವೆ. ಗಣೇಶ ಕೂರಿಸುವಷ್ಟು ದಿನ ಅವಕಾಶಕ್ಕೆ ಮನವಿ ಮಾಡುತ್ತೇವೆ ಎಂದರು.

ಶಾಸ್ತ್ರೋತ್ತವಾಗಿ ಎಷ್ಟು ದಿನ ಗಣೇಶ ಕೂರಿಸಲಾಗುತ್ತೋ ಅಷ್ಟು ದಿನ ಸರ್ಕಾರ ರಕ್ಷಣೆ ಕೊಡಬೇಕು. ಈದ್ಗಾ ಮೈದಾನ, ಪಾಕಿಸ್ತಾನದಲ್ಲಿಲ್ಲ, ಅಘ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿಲ್ಲ ಭಾರತದಲ್ಲಿದೆ. ಗಣೇಶ ಕೂರಿಸಲು ಯಾರು ವಿರೋಧ ಮಾಡ್ತಾರೆ ನೋಡೋಣಾ. ತಾಕತ್ ಇದ್ದರೆ ವಿರೋಧ ಮಾಡಲಿ. ನಮ್ಮ ದೇಶದಲ್ಲಿ ಗಣೇಶನಿಡಲು ವಿರೋಧ ಮಾಡಲಾಗದು. ನಾವು ಇಲ್ಲಿ ಅಲ್ಲಾಹ್ ನನ್ನು ಇಡಲು, ಏಸು ಕ್ರಿಸ್ತನ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದ್ರೆ ಗಣೇಶನನ್ನು ಕೂರಿಸಲು ಹೇಗೆ ವಿರೋಧ ಮಾಡುವಿರಿ? ಸಹನೆ ಮೀರಿ ಹೋಗಿದೆ. ಪಾಲಿಕೆ, ಬಿಜೆಪಿ, ಕಾಂಗ್ರೆಸ್, ಮುಸ್ಲಿಮರು ಎಲ್ಲರೂ ಇಲ್ಲಿ ತಲೆ ಬಾಗಲೇ ಬೇಕು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶದಿಂದ ಹೇಳಿದರು.