Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಯಾಗದೆ ಬೋರ್​​ವೆಲ್​ ನೀರೇ ಗತಿ, ಆದ್ರೆ ಸರಿಯಾಗಿ ವಿದ್ಯುತ್​​​ ಪೂರೈಕೆಯಾಗುತ್ತಿಲ್ಲ: ಗದಗ-ಬಾಗಲಕೋಟೆ ರೈತರ ಆಕ್ರೋಶ

ಮಳೆಯಾಗದೆ ಬೋರ್​​ವೆಲ್​ ನೀರೇ ಗತಿ, ಆದ್ರೆ ಸರಿಯಾಗಿ ವಿದ್ಯುತ್​​​ ಪೂರೈಕೆಯಾಗುತ್ತಿಲ್ಲ: ಗದಗ-ಬಾಗಲಕೋಟೆ ರೈತರ ಆಕ್ರೋಶ

ಸಾಧು ಶ್ರೀನಾಥ್​
|

Updated on:Aug 17, 2023 | 2:34 PM

ಸಮರ್ಪಕ ವಿದ್ಯುತ್ ಪೂರೈಕೆ ಮಾಡದಕ್ಕೆ ರಾತ್ರೋರಾತ್ರಿ ವಿದ್ಯುತ್ ಪ್ರಸರಣ ಘಟಕಕ್ಕೆ ರೈತರು ಮುತ್ತಿಗೆ ಹಾಕಿದ್ರು. ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ಹೆಸ್ಕಾಂ ಘಟಕದ (HESCOM) ಕಚೇರಿಗೆ ಮುತ್ತಿಗೆ ಹಾಕಿದ್ರು. ನಮಗೆ ಕೊಡದಿದ್ದರೇ, ಕೈಗಾರಿಕೆಗೆಗಳಿಗೂ ವಿದ್ಯುತ್ ಕೊಡಬೇಡಿ. ಮಳೆಯಾಗದೆ ಬೋರ್​​ವೆಲ್​ ನೀರೇ ಗತಿಯಾಗಿದ್ದು ಬೋರ್​ವೆಲ್​ ಓಡಿಸಲು ಕರೆಂಟ್​ ಅಗತ್ಯವಾಗಿದೆ ಎಂದು ರೈತರು ಆಗ್ರಹಿಸಿದರು. ಬಾಗಲಕೋಟೆ (Bagalkote) ಜಿಲ್ಲೆಯಲ್ಲಿಯೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡದಕ್ಕೆ ರಾತ್ರೋರಾತ್ರಿ ಮುಧೋಳ ತಾಲೂಕಿನ ಲೋಕಾಪುರ ವಿದ್ಯುತ್ ಪ್ರಸರಣ ಘಟಕಕ್ಕೆ ರೈತರು ಮುತ್ತಿಗೆ ಹಾಕಿದ್ರು.

ಸಮರ್ಪಕ ವಿದ್ಯುತ್ ಪೂರೈಕೆ ಮಾಡದಕ್ಕೆ ರಾತ್ರೋರಾತ್ರಿ ವಿದ್ಯುತ್ ಪ್ರಸರಣ ಘಟಕಕ್ಕೆ ರೈತರು ಮುತ್ತಿಗೆ ಹಾಕಿದ್ರು. ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ಹೆಸ್ಕಾಂ ಘಟಕದ (HESCOM) ಕಚೇರಿಗೆ ಮುತ್ತಿಗೆ ಹಾಕಿದ್ರು. ಹರದಗಟ್ಟಿ, ಮಂಜಲಾಪುರ, ಅಡರಕಟ್ಟಿ ಗ್ರಾಮಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದ ರೈತರು (Farmers) ಕಂಗಾಲಾಗಿದ್ರು. ನಿನ್ನೆ ಬುಧವಾರ ವಿದ್ಯುತ್​​​​ ಘಟಕಕ್ಕೆ ಮುತ್ತಿಗೆ ಹಾಕಿ, ನಮಗೆ ಸಮರ್ಪಕ ವಿದ್ಯುತ್ ಕೊಡಿ (Power shortage) ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ನಮಗೆ ಕೊಡದಿದ್ದರೇ, ಕೈಗಾರಿಕೆಗೆಗಳಿಗೂ ವಿದ್ಯುತ್ ಕೊಡಬೇಡಿ. ಮಳೆಯಾಗದೆ ಬೋರ್​​ವೆಲ್​ ನೀರೇ ಗತಿಯಾಗಿದ್ದು ಬೋರ್​ವೆಲ್​ ಓಡಿಸಲು ಕರೆಂಟ್​ ಅಗತ್ಯವಾಗಿದೆ ಎಂದು ರೈತರು ಆಗ್ರಹಿಸಿದರು.

ಬಾಗಲಕೋಟೆ (Bagalkote) ಜಿಲ್ಲೆಯಲ್ಲಿಯೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡದಕ್ಕೆ ರಾತ್ರೋರಾತ್ರಿ ಮುಧೋಳ ತಾಲೂಕಿನ ಲೋಕಾಪುರ ವಿದ್ಯುತ್ ಪ್ರಸರಣ ಘಟಕಕ್ಕೆ ರೈತರು ಮುತ್ತಿಗೆ ಹಾಕಿದ್ರು. ವಿದ್ಯುತ್ ಸಮಸ್ಯೆಯಿಂದ ರೈತರು ಕಂಗಾಲಾಗಿದ್ರು. ನಿನ್ನೆ ಬುಧವಾರ ವಿದ್ಯುತ್​​​​ ಘಟಕಕ್ಕೆ ಮುತ್ತಿಗೆ ಹಾಕಿ, ನಮಗೆ ಸಮರ್ಪಕ ವಿದ್ಯುತ್ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ನಮಗೆ ಕೊಡದಿದ್ದರೇ, ಕೈಗಾರಿಕೆಗೆಗೂ ವಿದ್ಯುತ್ ಕೊಡಬೇಡಿ ಎಂದು ರೈತರು ಪಟ್ಟುಹಿಡಿದ್ರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 17, 2023 02:29 PM