ಬಿಎಂಟಿಸಿ ಮುಂಭಾಗದ ಚಕ್ರ ಹರಿದು ಮಗು ಸಾವು.. ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಬಿಎಂಟಿಸಿ ಮುಂಭಾಗದ ಚಕ್ರ ಹರಿದು ಮಗು ಸಾವು.. ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಸಾಧು ಶ್ರೀನಾಥ್​
|

Updated on: Aug 17, 2023 | 2:58 PM

ಬೆಂಗಳೂರಿನ ಉತ್ತರಹಳ್ಳಿಯ ಪ್ರಸನ್ನ ಎಂಬಾತ ತನ್ನ ನಾಲ್ಕು ವರ್ಷದ ಮಗಳು ಪೂರ್ವಿಯನ್ನ ನಿನ್ನೆ ಬುಧವಾರ ಶಾಲೆಗೆ ಕರೆದುಕೊಂಡು ಹೋಗ್ತಿದ್ದರು. ತನ್ನ ಸ್ಪ್ಲೆಂಡರ್‌ ಬೈಕ್‌ನಲ್ಲಿ ಮಗಳನ್ನ ಕೂರಿಸಿಕೊಂಡು ಶಾಲೆಗೆ ಹೊರಟಿದ್ದ. ಇನ್ನೇನು ಶಾಲೆ ತಲುಪಬೇಕು ಅನ್ನೋವಾಗ್ಲೇ ಘೋರವೇ ನಡೆದು ಹೋಗಿದೆ. ಉತ್ತರಹಳ್ಳಿಯ ಸುಬ್ರಮಣ್ಯ ಪುರ ಮುಖ್ಯರಸ್ತೆಯಲ್ಲಿ ಇವರ ಬೈಕ್‌ಗೆ ಬಿಎಂಟಿಸಿ ಬಸ್‌ ಟಚ್ ಆಗಿದೆ ಅಷ್ಟೇ..ಬೈಕ್‌ ನೆಲಕ್ಕೆ ಉರುಳಿತ್ತು.

ಆಕೆ ನಾಲ್ಕು ವರ್ಷದ ಪುಟ್ಟ ಬಾಲಕಿ.. ನಿತ್ಯ ತಂದೆ ಜತೆ ಶಾಲೆಗೆ ಹೋಗ್ತಿದ್ದ ಬಾಲೆ ಖುಷಿ ಖುಷಿಯಾಗಿ ಮನೆಗೆ ಮರಳುತ್ತಿದ್ಲು. ಆದ್ರೆ ನಿನ್ನೆ ಬುಧವಾರ ಮಾತ್ರ ಶಾಲೆಗೆ ಹೊರಟಿದ್ದಾಗ್ಲೇ ಸಾವಿನ ಮನೆ ಸೇರಿದ್ದಾಳೆ. ಯಮನಂತೆ ಎದುರಾದ ಬಿಎಂಟಿಸಿ ಬಸ್‌ (BMTC bus) ಅಲ್ಲಿ ಬಾಲಕಿಯನ್ನ ಬಲಿ ಪಡೆದಿತ್ತು. ಪುಟಾಣಿಯ ಹೊಟ್ಟೆ ತುಂಬಿಸಬೇಕಿದ್ದ ಊಟದ ಡಬ್ಬಿ ಬೈಕ್‌ನಲ್ಲೇ ಇತ್ತು.. ನಿತ್ಯ ಶಾಲೆಗೆ ಕರೆಕೊಂಡು ಹೋಗ್ತಿದ್ದ ಅಪ್ಪನ ಬೈಕ್‌ ಮೌನವಾಗಿದ್ದಾರೆ. ಬೈಕ್‌ನಲ್ಲಿ ಶಾಲೆಗೆ ಹೋಗಬೇಕಿದ್ದವಳು ಶವವಾಗಿದ್ಲು. ಬಿಬಿಎಂಟಿಸಿ ಅಟ್ಟಹಾಸ, ಅಪ್ಪನ ಸಣ್ಣ ನಿರ್ಲಕ್ಷ್ಯ ಶಾಲೆ ತಲುಪೋ ಮುನ್ನವೇ ಈಕೆಯನ್ನ (school girl) ಸಾವಿನ ಮನೆಗೆ ಸೇರಿಸಿತ್ತು.

ಬೆಂಗಳೂರಿನ ಉತ್ತರಹಳ್ಳಿಯ ಪ್ರಸನ್ನ ಎಂಬಾತ ತನ್ನ ನಾಲ್ಕು ವರ್ಷದ ಮಗಳು ಪೂರ್ವಿಯನ್ನ ನಿನ್ನೆ ಬುಧವಾರ ಶಾಲೆಗೆ ಕರೆದುಕೊಂಡು ಹೋಗ್ತಿದ್ದರು. ತನ್ನ ಸ್ಪ್ಲೆಂಡರ್‌ ಬೈಕ್‌ನಲ್ಲಿ ಮಗಳನ್ನ ಕೂರಿಸಿಕೊಂಡು ಶಾಲೆಗೆ ಹೊರಟಿದ್ದ. ಇನ್ನೇನು ಶಾಲೆ ತಲುಪಬೇಕು ಅನ್ನೋವಾಗ್ಲೇ ಘೋರವೇ ನಡೆದು ಹೋಗಿದೆ. ಉತ್ತರಹಳ್ಳಿಯ ಸುಬ್ರಮಣ್ಯ ಪುರ ಮುಖ್ಯರಸ್ತೆಯಲ್ಲಿ ( Uttarahalli bangalore south) ಇವರ ಬೈಕ್‌ಗೆ ಬಿಎಂಟಿಸಿ ಬಸ್‌ ಟಚ್ ಆಗಿದೆ ಅಷ್ಟೇ..ಬೈಕ್‌ ನೆಲಕ್ಕೆ ಉರುಳಿತ್ತು. ಬೈಕ್ ಎಡ ಭಾಗಕ್ಕೆ ತಂದೆ ಪ್ರಸನ್ನ.. ಬಲಭಾಗಕ್ಕೆ ಮಗು ಪೂರ್ವಿ ಬಿದ್ದಿದ್ದಾಳೆ. ಈ ವೇಳೆ ಬಿಎಂಟಿಸಿಯ ಮುಂಭಾಗದ ಚಕ್ರ ಪೂರ್ವಿಯ ತಲೆ ಭಾಗದಲ್ಲಿ ಹರಿದಿದೆ. ಆಸ್ಪತ್ರೆಗೆ ಸೇರಿಸೋ ಮುನ್ನವೇ ಪೂರ್ವಿ ಪ್ರಾಣ ಬಿಟ್ಟಿದ್ಲು. ಪ್ರತ್ಯಕ್ಷದರ್ಶಿ ಕುನ್ನಾರಾಮ್ ಹೇಳಿರೋದನ್ನ ವಿಡಿಯೋದಲ್ಲಿ ನೋಡಿ.

ಅಷ್ಟಕ್ಕೂ ಇಲ್ಲಿ ತಿರುವು ಇದ್ದು, ಇಲ್ಲೇ ರೋಡ್‌ ಕ್ರಾಸ್‌ ಮಾಡಲು ಪ್ರಸನ್ನ ಮುಂದಾಗಿದ್ರು. ಈ ವೇಳೆ ಬೈಕ್‌ ವಿರುದ್ಧದ ದಿಕ್ಕಿನಿಂದ ಬಿಎಂಟಿಸಿ ಬಸ್‌ ಬರ್ತಿತ್ತು. ವಿರುದ್ಧದ ದಿಕ್ಕಿನಿಂದ ಬಂದ ಬಸ್‌ ಇವರ ಬೈಕ್‌ಗೆ ಟಚ್ ಆಗಿ ಅಪಘಾತ ಆಗಿತ್ತು. ಇಲ್ಲಿ ಬಿಎಂಟಿಸಿ ಚಾಲಕನ ಅಜಾಗುರತೆ ಎದ್ದು ಕಾಣ್ತಿದೆ. ಜತೆಗೆ ಪೂರ್ವಿಯ ತಂದೆ ಪ್ರಸನ್ನ ಕೂಡಾ ತಿರುವಿನಲ್ಲಿ ನಿರ್ಲಕ್ಷ್ಯ ವಹಿಸಿರೋದು ಕೂಡಾ ಅಪಘಾತಕ್ಕೆ ಕಾರಣವಾಗಿದೆ . ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿರೋ ಕುಮಾರಸ್ವಾಮಿ‌ ಲೇಔಟ್ ಸಂಚಾರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ