ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸುವುದು ಅವರ ಮಗನಿಗೆ ಸಾಧ್ಯವಾಗಲಿಲ್ಲ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 01, 2022 | 4:29 PM

ಮಹಾರಾಷ್ಟ್ರದಿಂದ ಹೊರಗಿದ್ದ ಅವರು ಸಕಾಲದಲ್ಲಿ ಮುಂಬೈ ತಲುಪಲಾಗಲಿಲ್ಲ. ವಿಮಾನ ನಿಲ್ದಾಣದ ಹೊರಗಡೆ ಅವರು ತಮ್ಮ ತಂದೆಯೊಂದಿಗೆ ಮಾತಾಡುತ್ತಾ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದನ್ನು ಕೇಳಿಸಿಕೊಳ್ಳಬಹುದು.

Mumbai: ತಂದೆಗೆ ಸತ್ಕಾರ ಮಾಡುವುದನ್ನು, ಪ್ರಶಸ್ತಿ-ಪುರಸ್ಕಾರ ಸಿಕ್ಕಾಗ ಅವುಗಳನ್ನು ಗಣ್ಯರಿಂದ ಸ್ವೀಕರಿಸುವ ಸಮಾರಂಭದಲ್ಲಿ ಭಾಗಿಯಾಗುವ ಉತ್ಸುಕತೆ, ಆಕಾಂಕ್ಷೆ ಎಲ್ಲ ಮಕ್ಕಳಿಗೆ ಇರುತ್ತದೆ. ಅದರೆ, ಗುರುವಾರ ಏಕಾನಾಥ ಶಿಂದೆ (Eknath Shinde) ಅವರು ಮಾಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಭಾಗಿಯಾಗುವುದು ಅವರ ಮಗ ಶ್ರೀಕಾಂತ್ ಶಿಂದೆಗೆ (Srikanth Shinde) ಸಾಧ್ಯವಾಗಲಿಲ್ಲ. ಮಹಾರಾಷ್ಟ್ರದಿಂದ (Maharashtra) ಹೊರಗಿದ್ದ ಅವರು ಸಕಾಲದಲ್ಲಿ ಮುಂಬೈ ತಲುಪಲಾಗಲಿಲ್ಲ. ವಿಮಾನ ನಿಲ್ದಾಣದ ಹೊರಗಡೆ ಅವರು ತಮ್ಮ ತಂದೆಯೊಂದಿಗೆ ಮಾತಾಡುತ್ತಾ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದನ್ನು ಕೇಳಿಸಿಕೊಳ್ಳಬಹುದು.

ಇದನ್ನೂ ಓದಿ:  Viral Video: ಮಂಗವನ್ನು ಬೇಟೆಯಾಡುವ ಚಿರತೆಯ ರೋಮಾಂಚನಕಾರಿ ವಿಡಿಯೋ ವೈರಲ್