Video: ತಮ್ಮ ಸಾವಿಗೂ ಮುನ್ನ ಬೊಂಡಿ ಬೀಚ್ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

Updated on: Dec 17, 2025 | 7:14 AM

ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಬೊಂಡಿ ಬೀಚ್​ನಲ್ಲಿ ಕಳೆದ ಭಾನುವಾರ ಇಬ್ಬರು ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದರು. ದಂಪತಿ ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಪ್ರಯತ್ನಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಡ್ಯಾಶ್‌ಕ್ಯಾಮ್ ವೀಡಿಯೊವೊಂದರಲ್ಲಿ, ಪಾದಚಾರಿ ಮಾರ್ಗದಲ್ಲಿ ದಂಪತಿ ಬಂದೂಕುಧಾರಿಯೊಂದಿಗೆ ಸೆಣಸಾಡುತ್ತಿರುವುದನ್ನು ಕಾಣಬಹುದು.ವೀಡಿಯೊದಲ್ಲಿ ಶಾರ್ಟ್ಸ್ ಮತ್ತು ಲ್ಯಾವೆಂಡರ್ ಟಿ-ಶರ್ಟ್ ಧರಿಸಿದ ವೃದ್ಧ ವ್ಯಕ್ತಿ ಬಿಳಿ ಪ್ಯಾಂಟ್ ಧರಿಸಿದ ಬಂದೂಕು ಹಿಡಿದ ವ್ಯಕ್ತಿಯೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು. ದಾಳಿಯಲ್ಲಿ ಅವರು ಬದುಕುಳಿಯದೇ ಇದ್ದರೂ ಅವರ ಕಾರ್ಯ ಶ್ಲಾಘನೀಯ.

ಸಿಡ್ನಿ, ಡಿಸೆಂಬರ್ 17: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಬೊಂಡಿ ಬೀಚ್​ನಲ್ಲಿ ಕಳೆದ ಭಾನುವಾರ ಇಬ್ಬರು ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದರು. ದಂಪತಿ ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಪ್ರಯತ್ನಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಡ್ಯಾಶ್‌ಕ್ಯಾಮ್ ವೀಡಿಯೊವೊಂದರಲ್ಲಿ, ಪಾದಚಾರಿ ಮಾರ್ಗದಲ್ಲಿ ದಂಪತಿ ಬಂದೂಕುಧಾರಿಯೊಂದಿಗೆ ಸೆಣಸಾಡುತ್ತಿರುವುದನ್ನು ಕಾಣಬಹುದು.ವೀಡಿಯೊದಲ್ಲಿ ಶಾರ್ಟ್ಸ್ ಮತ್ತು ಲ್ಯಾವೆಂಡರ್ ಟಿ-ಶರ್ಟ್ ಧರಿಸಿದ ವೃದ್ಧ ವ್ಯಕ್ತಿ ಬಿಳಿ ಪ್ಯಾಂಟ್ ಧರಿಸಿದ ಬಂದೂಕು ಹಿಡಿದ ವ್ಯಕ್ತಿಯೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು. ದಾಳಿಯಲ್ಲಿ ಅವರು ಬದುಕುಳಿಯದೇ ಇದ್ದರೂ ಅವರ ಕಾರ್ಯ ಶ್ಲಾಘನೀಯ.

ದಂಪತಿ ತಮ್ಮ ಜೀವದ ಹಂಗನ್ನು ತೊರೆದು, ತಮ್ಮ ಶಕ್ತಿಗೂ ಮೀರಿ ಪ್ರಯತ್ನಿಸಿದ್ದರು. ಕೊನೆಗೆ ಹಣ್ಣು ಮಾರಾಟಗಾರ ಅಹ್ಮದ್ ಎಂಬುವವರು ದಾಳಿಕೋರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅವರಿಗೂ ಕೂಡ ಎರಡು ಗುಂಡು ತಗುಲಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 17, 2025 07:13 AM