ಇಂಗ್ಲಿಷ್​​, ಹಿಂದಿಯಲ್ಲಿ ಮನವಿ ಮಾಡಿದ ರೈತ: ಬಹುಭಾಷೆಯಲ್ಲಿ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!

Updated on: May 13, 2026 | 4:32 PM

ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ವಯಸ್ಕ ರೈತರೊಬ್ಬರು ಶಾಸಕ ಸುರೇಶ್ ಬಾಬು ಬಳಿ ಇಂಗ್ಲಿಷ್, ಹಿಂದಿಯಲ್ಲಿ ಸಮಸ್ಯೆ ಹೇಳಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅವರ ಮಾತುಗಳಲ್ಲಿ ನೋವೂ ಇದೆ, ಹೋರಾಟದ ಶಕ್ತಿಯೂ ಇದೆ! ಎಂದು ನೆಟ್ಟಿಗರು ಪ್ರಶಂಸಿದ್ದಾರೆ. ಅಹವಾಲು ನೀಡಲು ಬಂದ ರೈತ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಶಾಸಕರೂ ಆಶ್ಚರ್ಯಪಟ್ಟಿದ್ದಾರೆ.

ತುಮಕೂರು, ಮೇ 13: ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ವಯಸ್ಕ ರೈತರೋರ್ವರು ತಮ್ಮ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಇಂಗ್ಲಿಷ್​​ ಮತ್ತು ಹಿಂದಿಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಹವಾಲು ನೀಡಲು ಬಂದ ರೈತ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕಂಡು ಶಾಸಕ ಸಿ.ಬಿ. ಸುರೇಶ್​​ ಬಾಬು ಅಚ್ಚರಿಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿ ಎದುರು ಅಚಲವಾಗಿ ನಿಂತಿರುವ ಈ ವಯೋವೃದ್ಧ ರೈತನ ಮನಕಲುಕುವ ಮನವಿಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಕೇಳಿ. ಅವರ ಮಾತುಗಳಲ್ಲಿ ನೋವೂ ಇದೆ, ಹೋರಾಟದ ಶಕ್ತಿಯೂ ಇದೆ ಎಂದು ನೆಟ್ಟಿಗರು ಪ್ರಶಂಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 13, 2026 04:31 PM
Follow Us