ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೃದ್ಧರೊಬ್ಬರು ಹೃದಯಾಘಾರಕ್ಕೊಳಗಾಗಿ ನಿಧನರಾದರು

Edited By:

Updated on: Sep 10, 2022 | 6:05 PM

ಕಾರ್ಯಕ್ರಮ ನಡೆಯುವಾಗ ಕುಸಿದುಬಿದ್ದ ಸಿದ್ದಲಿಂಗಪ್ಪನವರನ್ನು ಕೂಡಲೇ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಯಿತು.

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ (Doddaballapura) ಶನಿವಾರ ನಡೆದ ಬಿಜೆಪಿಯ ಅದ್ದೂರಿ ಜನಸ್ಪಂದನ (Janaspandana) ಕಾರ್ಯಕ್ರಮದಲ್ಲಿ ವೃದ್ಧರೊಬ್ಬರು ಹೃದಯಾಘಾತಕ್ಕೊಳಗಾಗಿ (heart attack) ಮೃತಪಟ್ಟಿದ್ದಾರೆ. ಮೃತವ್ಯಕ್ತಿಯನ್ನು ತುಮಕೂರಿನ ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದೆ. ಕಾರ್ಯಕ್ರಮ ನಡೆಯುವಾಗ ಕುಸಿದುಬಿದ್ದ ಸಿದ್ದಲಿಂಗಪ್ಪನವರನ್ನು ಕೂಡಲೇ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಯಿತು.