ವಿದ್ಯುತ್ ಕುಮಾರಸ್ವಾಮಿ ಕದಿಯಲಿ ಅಥವಾ ಬೇರೆ ಯಾರಾದರೂ; ಅದು ಕಳ್ಳತನವೇ: ಡಿಕೆ ಶಿವಕುಮಾರ್

|

Updated on: Nov 14, 2023 | 1:46 PM

ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಮಾಧ್ಯಮಗಳಲ್ಲಿ ನೋಡಿದ ಬಳಿಕ ಅದು ತನ್ನ ಗಮನಕ್ಕೆ ಬಂದಿದ್ದು, ವಿದ್ಯುತ್ ಯಾರು ಕದ್ದರೇನು ಅದು ಕಳ್ಳತನವೇ, ಬೆಸ್ಕಾಂ ಆಧಿಕಾರಿಗಳು ಮತ್ತು ಇಂಧನ ಖಾತೆ ಸಚಿವ ಕೆಜೆ ಜಾರ್ಜ್ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ವಿಷಯ ಅವರ ಸುಪರ್ದಿಗೆ ಬಿಟ್ಟಿದ್ದು ಎಂದರು.

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಅವರನ್ನು ಎಡಬಿಡದೆ ಟೀಕಿಸುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ವಿರೋಧಿಗಳ ಕೈಗೆ ತಾವೇ ಹಗ್ಗ ನೀಡಿ ಕೈ ಕಟ್ಟಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮನೆಗೆ ದೀಪಗಳ ಅಲಂಕಾರ ಮಾಡಿಸುವ ಭರದಲ್ಲಿ ವಿದ್ಯುತ್ ಕಂಬದಿಂದ ನೇರವಾಗಿ ಸಂಪರ್ಕ ಪಡೆಯಲಾಗಿತ್ತಂತೆ, ಇದು ಅಚಾತುರ್ಯದಿಂದಲೇ ಅಗಿರಬಹುದು ಮತ್ತು ಏನು ನಡೆದಿದೆ ಅಂತ ಕುಮಾರಸ್ವಾಮಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೆ ಕಾಂಗ್ರೆಸ್ ಬಿಡಬೇಕಲ್ಲ? ವಿದ್ಯುತ್ ಕಳ್ಳ ಅಂತ ಟ್ವೀಟ್ ಗಳನ್ನು ಮಾಡಲಾಗುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಮಾಧ್ಯಮಗಳಲ್ಲಿ ನೋಡಿದ ಬಳಿಕ ಅದು ತನ್ನ ಗಮನಕ್ಕೆ ಬಂದಿದ್ದು, ವಿದ್ಯುತ್ ಯಾರು ಕದ್ದರೇನು ಅದು ಕಳ್ಳತನವೇ, ಬೆಸ್ಕಾಂ ಆಧಿಕಾರಿಗಳು ಮತ್ತು ಇಂಧನ ಖಾತೆ ಸಚಿವ ಕೆಜೆ ಜಾರ್ಜ್ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ವಿಷಯ ಅವರ ಸುಪರ್ದಿಗೆ ಬಿಟ್ಟಿದ್ದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ