ಕತ್ತಲಲ್ಲಿ ಬಂದ್ರು, ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು! ಕಳ್ಳರ ಕೈ ಚಳಕದ ಹಿಂದಿದ್ಯಾ ಬೇರೆ ದಂಧೆ?

Edited By:

Updated on: Apr 21, 2026 | 9:46 AM

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಸು ಕಳ್ಳತನದ ಪ್ರಕರಣ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಆಗ್ಸ್ಟೈನ್ ಮತ್ತು ಪ್ರಸಾದ್ ಎಂಬ ಹಸು ಸಾಕಾಣಿಕಾರರ ಮನೆ ಪಾರ್ಕಿಂಗ್ ಪ್ರದೇಶದಿಂದ ಮೂರು ಹಸುಗಳು ಹಾಗೂ ಒಂದು ಕರು ಕಳ್ಳತನವಾಗಿವೆ. ಜರ್ಸಿ ಮತ್ತು ಎರಡು ಹೆಚ್‌ಎಫ್ ತಳಿಯ ಹಸುಗಳನ್ನು ರಾತ್ರಿ ವೇಳೆ ಕಾರಿನಲ್ಲಿ ಬಂದ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಸುಗಳಿಗೆ ಹುಲ್ಲು ಹಾಕಿ ಮಲಗಿದ್ದ ಮಾಲೀಕರು ಬೆಳಿಗ್ಗೆ ನೋಡಿದಾಗ ಅವು ಕಾಣೆಯಾಗಿದ್ದು ಶಾಕ್ ಆಗಿದ್ದಾರೆ. ಕಳ್ಳರು ಹಸುಗಳನ್ನು ಬೇರೆಡೆ ಮಾರಾಟಕ್ಕೆ ಅಥವಾ ಕಸಾಯಿಖಾನೆಗೆ ಕೊಂಡೊಯ್ದಿರಬಹುದು ಎನ್ನಲಾಗಿದೆ. ಒಟ್ಟಾರೆ ಕದ್ದೊಯ್ದ ಹಸುಗಳ ಬೆಲೆ ಒಂದೂ ವರೆ ಲಕ್ಷಗಳಗಳಷ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಆನೆಕಲ್, ಏಪ್ರಿಲ್ 21: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಸು ಕಳ್ಳತನದ ಪ್ರಕರಣ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಆಗ್ಸ್ಟೈನ್ ಮತ್ತು ಪ್ರಸಾದ್ ಎಂಬ ಹಸು ಸಾಕಾಣಿಕಾರರ ಮನೆ ಪಾರ್ಕಿಂಗ್ ಪ್ರದೇಶದಿಂದ ಮೂರು ಹಸುಗಳು ಹಾಗೂ ಒಂದು ಕರು ಕಳ್ಳತನವಾಗಿವೆ. ಜರ್ಸಿ ಮತ್ತು ಎರಡು ಹೆಚ್‌ಎಫ್ ತಳಿಯ ಹಸುಗಳನ್ನು ರಾತ್ರಿ ವೇಳೆ ಕಾರಿನಲ್ಲಿ ಬಂದ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಸುಗಳಿಗೆ ಹುಲ್ಲು ಹಾಕಿ ಮಲಗಿದ್ದ ಮಾಲೀಕರು ಬೆಳಿಗ್ಗೆ ನೋಡಿದಾಗ ಅವು ಕಾಣೆಯಾಗಿದ್ದು ಶಾಕ್ ಆಗಿದ್ದಾರೆ. ಕಳ್ಳರು ಹಸುಗಳನ್ನು ಬೇರೆಡೆ ಮಾರಾಟಕ್ಕೆ ಅಥವಾ ಕಸಾಯಿಖಾನೆಗೆ ಕೊಂಡೊಯ್ದಿರಬಹುದು ಎನ್ನಲಾಗಿದೆ. ಒಟ್ಟಾರೆ ಕದ್ದೊಯ್ದ ಹಸುಗಳ ಬೆಲೆ ಒಂದೂ ವರೆ ಲಕ್ಷಗಳಗಳಷ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 21, 2026 09:44 AM
Follow Us