ಮಹಿಳಾ ಅಧಿಕಾರಿಗೆ ಕೊಡೋ ಗೌರವ ಇದೇನಾ? ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ

Edited By:

Updated on: Nov 16, 2026 | 7:38 PM

ಹಾಸನದ ಬೇಲೂರಿನಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನದ ಅಂತರದಲ್ಲಿ ಇಬ್ಬರು ಬಲಿಯಾಗಿದ್ದಾರೆ.ತಾಲೂಕು ಆಸ್ಪತ್ರೆ ಎದುರು ಸಾವಿರಾರು ಜನ ಜಮಾಯಿಸಿ ರಸ್ತೆ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನೆಕಾರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಅಲ್ಲದೇ ಹಾಸನ ಜಿಲ್​ಲಾಧಿಕಾರಿ ಲತಾ ಕುಮಾರಿ ಅವರಿಗೂ ಸಹ ಪ್ರತಿಭಟನೆಕಾರರು ಏಕವಚನದಲ್ಲಿ ಬೈದು ತಮ್ಮ ಆಕ್ರೋಶ ಹಾಕಿದ್ದಾರೆ. ಇನ್ನೊಂದೆಡೆ ಪ್ರತಿಭಟನೆಕಾರರ ಮಾತಿನಿಂದ ಡಿಸಿ ಲತಾ ಕುಮಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಸನ, ನವೆಂಬರ್ 26: ಹಾಸನದ ಬೇಲೂರಿನಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನದ ಅಂತರದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಒಬ್ಬರ ಸಾವಿನ ನೋವು ಮಾಸುವ ಮುನ್ನವೇ ಮತ್ತೊಂದು ಜೀವ ಬಲಿಯಾಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.. ನಿನ್ನೆವರೆಗೂ ಶವವಿಟ್ಟು ಪ್ರತಿಭಟನೆ ನಡೆಸಿದ್ದ ಜನ, ಇಂದು (ನವೆಂಬರ್ 16 ಮತ್ತೊಂದು ಸಾವಿನಿಂದ ಕೆರಳಿದ್ದು, ತಾಲೂಕು ಆಸ್ಪತ್ರೆ ಎದುರು ಸಾವಿರಾರು ಜನ ಜಮಾಯಿಸಿ ರಸ್ತೆ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನೆಕಾರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಅಲ್ಲದೇ ಹಾಸನ ಜಿಲ್​ಲಾಧಿಕಾರಿ ಲತಾ ಕುಮಾರಿ ಅವರಿಗೂ ಸಹ ಪ್ರತಿಭಟನೆಕಾರರು ಏಕವಚನದಲ್ಲಿ ಬೈದು ತಮ್ಮ ಆಕ್ರೋಶ ಹಾಕಿದ್ದಾರೆ.

ಹಫೀಜ್​ ರೆಹಾಮಾನ್​ರನ್ನ ಬೇಲೂರು ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ನೋಡಿ ಹಫೀಜ್​ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆಗ ಜನ ಮರಣೋತ್ತರ ಪರೀಕ್ಷೆಗೆ ಕೊಡಲ್ಲ ಎಂದಿದ್ದಾರೆ. ಆದರೆ ಡಿಸಿ ನನಗೆ ಕರೆ ನಿಮ್ಮ ವಿರುದ್ಧ ಕೇಸ್ ಹಾಕ್ತೇನೆ ಅಂತಾರೆ ಎಂದು ರೈತ ಹೋರಾಟಗಾರ ಸ್ವಾಮಿಗೌಡ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಯನ್ನ ಮೊದಲ ಜಿಲ್ಲೆಯಿಂದ ವರ್ಗಾವಣೆ ಮಾಡಿಸಿ. ಅವಳನ್ನು ಹೇಗೆ ಓಡಿಸಬೇಕು ಎಂದು ನನಗೆ ಗೊತ್ತಿದೆ ಎಂದು ಜಿಲ್ಲಾಧಿಕಾರಿ ಎದುರೇ ಏಕವಚನದಲ್ಲಿ ಕಿಡಿಕಾರಿದ್ದಾರೆ.ಸ್ವಾಮಿಗೌಡ ಮಾತಿಗೆ ಕೆರಳಿ ಕೆಂಡವಾದ ಡಿಸಿ ಲತಾ ಕುಮಾರ್​​, ಏನ್ರಿ ಅವರು ಅವ್ಯಾಚ್ಚ ಶಬ್ದಗಳಿಂದ ಮಾತಾಡ್ತಾರೆ ಎಂದು ಗರಂ ಆದರು. ಈ ವೇಳೆ ಕಲವರು ಡಿಸಿ ಲತಾ ಕುಮಾರ್​​​​ ಅವರನ್ನು ಸಮಾಧಾನಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದಿ ಡಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 16, 2026 07:28 PM
Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More