Viral Video: ಪುಟ್ಟ ಬಾಲಕನಿಗೆ ಶೂ ವಾಪಾಸ್ ಕೊಟ್ಟ ಆನೆ; ಈ ಮುದ್ದಾದ ವಿಡಿಯೋ ಮಿಸ್ ಮಾಡಬೇಡಿ
ಚೀನಾದ ಮೃಗಾಲಯದಲ್ಲಿರುವ ಆನೆಯು ಆ ಮೃಗಾಲಯಕ್ಕೆ ಬಂದಿದ್ದ ಚಿಕ್ಕ ಹುಡುಗನಿಗೆ ಶೂ ವಾಪಾಸ್ ಕೊಟ್ಟಿರುವ ಹಳೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ.
ಚೀನಾದ ಶಾಂಡೋಂಗ್ ಪ್ರಾಂತ್ಯದ ವೈಹೈ ಮೃಗಾಲಯದಲ್ಲಿ 25 ವರ್ಷದ ಆನೆಯು ತನ್ನ ಪರೋಪಕಾರಿ ಗುಣದಿಂದಾಗಿ ಸಾವಿರಾರು ಜನ ಅಭಿಮಾನಿಗಳನ್ನು ಸಂಪಾದಿಸಿದೆ. ತನ್ನನ್ನು ನೋಡಲು ಮೃಗಾಲಯಕ್ಕೆ ಬಂದಿದ್ದ ಬಾಲಕನೊಬ್ಬನ ಶೂ ತನ್ನ ಬಳಿ ಬಿದ್ದಿರುವುದನ್ನು ನೋಡಿದ ಆನೆ ಅದನ್ನು ಆತನಿಗೆ ವಾಪಾಸ್ ಕೊಟ್ಟಿರುವ ವಿಡಿಯೋ ಭಾರೀ ವೈರಲ್ ಆಗಿದೆ. 2022ರಲ್ಲಿ ತೆಗೆದ ವಿಡಿಯೋ ಇದಾಗಿದ್ದು, ಮತ್ತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತನ್ನ ಬಳಿ ಬಿದ್ದಿದ್ದ ಶೂವನ್ನು ಸೊಂಡಿಲಿನಿಂದ ಎತ್ತಿಕೊಂಡ ಆನೆ ಮೇಲಿನಿಂದ ತನ್ನತ್ತ ಕೈ ಚಾಚಿದ ಬಾಲಕನ ಕೈಗೆ ಆ ಶೂ ನೀಡಿರುವ ವಿಡಿಯೋ ಇದಾಗಿದೆ. ಇದರಿಂದ ಖುಷಿಯಾದ ಬಾಲಕ ಒಂದು ಹಿಡಿ ಹುಲ್ಲನ್ನು ಎತ್ತಿಕೊಂಡು ಆನೆಗೆ ನೀಡಿದ್ದಾನೆ. ಆನೆ ಅದನ್ನು ಖುಷಿಯಿಂದ ತಿಂದಿದೆ. ‘ಮೌಂಟೇನ್ ರೇಂಜ್’ ಎಂದು ಹೆಸರಿಸಲಾದ 27 ವರ್ಷ ವಯಸ್ಸಿನ ಈ ಗಂಡು ಆನೆಯು ಮೃಗಾಲಯಕ್ಕೆ ಬರುವವರ ಫೇವರಿಟ್ ಆನೆಯಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ