Viral Video: ಕಬ್ಬಿಗಾಗಿ ಲಾರಿ ಅಡ್ಡಗಟ್ಟಿದ ಆನೆಗಳು; ಸಂಚಾರ ಅಸ್ತವ್ಯಸ್ತ

Updated By: Ganapathi Sharma

Updated on: Sep 25, 2025 | 11:25 AM

ಚಾಮರಾಜನಗರದಿಂದ ಸತ್ಯಮಂಗಲ ಕಡೆ ಸಂಚರಿಸುತ್ತಿದ್ದ ಕಬ್ಬು ತುಂಬಿದ ಲಾರಿಯನ್ನ ಮೂರು ಆನೆಗಳು ಒಟ್ಟಿಗೆ ಅಡ್ಡಗಟ್ಟಿರುವ ಘಟನೆ ನಡೆದಿದೆ. ಏಕಾಏಕಿ ಆನೆಗಳು ಲಾರಿ ಮೇಲೆ ಮುಗಿ ಬಿದ್ದಿದ್ದು, ಕಬ್ಬುಗಳನ್ನ ಕಿತ್ತು ತಿಂದಿವೆ. ಘಟನೆಯಿಂದಾಗಿ ಕೆಲ ಕಾಲ ಸಂಚಾರ ಅತ್ತವ್ಯಸ್ತಗೊಂಡಿದ್ದು ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಚಾಮರಾಜನಗರ, ಸೆಪ್ಟೆಂಬರ್​ 25: ಚಾಮರಾಜನಗರ ವ್ಯಾಪ್ತಿಯಲ್ಲಿ ರಾತ್ರಿವೇಳೆ ಸಂಚರಿಸುವ ಕಬ್ಬು ತುಂಬಿದ ಲಾರಿಗಳನ್ನ ಚೆಕ್​ ಪೋಸ್ಟ್​ ಸಿಬ್ಬಂದಿ ತಪಾಸಣೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಕಾಡಾನೆಗಳಂತೂ ಅಡ್ಡ ಹಾಕದೆ ಬಿಡುವುದಿಲ್ಲ ಎಂಬ ಸ್ಥಿತಿ ಇದೆ. ರಾತ್ರಿ ವೇಳೆ ಒಂಟಿ ಸಲಗದ ಹಾವಳಿಯಾದ್ರೆ, ಹಗಲು ಹೊತ್ತಲ್ಲಿ ಕುಟುಂಬ ಸಮೇತ ಗಜಪಡೆ ವಸೂಲಿಗೆ ಇಳಿಯುತ್ತಿವೆ. ಚಾಮರಾಜನಗರದಿಂದ ಸತ್ಯಮಂಗಲ ಕಡೆ ತೆರಳುತ್ತಿದ್ದ ಕಬ್ಬು ತುಂಬಿದ ಲಾರಿಯನ್ನ ಆನೆಗಳು ಅಡ್ಡಗಟ್ಟಿದ್ದು, ಮೂರು ಆನೆಗಳು ಕಬ್ಬಿಗಾಗಿ ಲಾರಿ ಮೇಲೆ ಮುಗಿ ಬಿದ್ದಿವೆ. ಘಟನೆಯಿಂದ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಸವಾರರು ಪರದಾಡಬೇಕಾಯ್ತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 25, 2025 11:19 AM