ಎಲ್ಲಿಸ್ ಪೆರ್ರಿ ಭರ್ಜರಿ ಸೆಂಚುರಿ: 1 ರನ್ನಿಂದ ಗೆದ್ದ ಸಿಡ್ನಿ ಸಿಕ್ಸರ್ಸ್
Sydney Sixers Women vs Adelaide Strikers Women: ಈ ಗುರಿ ಬೆನ್ನತ್ತಿದ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 18 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬ್ರಿಡ್ಜೆಟ್ ಪ್ಯಾಟರ್ಸನ್ 4, 4, 6 ಸಿಕ್ಸ್ ಬಾರಿಸಿದರು. ಈ ಮೂಲಕ ಕೊನೆಯ ಓವ ರ್ನ ಮೊದಲ ಮೂರು ಎಸೆತಗಳಲ್ಲಿ 14 ರನ್ ಕಲೆಹಾಕಿದರು.
ವುಮೆನ್ಸ್ ಬಿಗ್ ಬ್ಯಾಷ್ ಲೀಗ್ನ 40ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವು ಒಂದು ರನ್ನ ರೋಚಕ ಜಯ ಸಾಧಿಸಿದೆ. ನಾರ್ತ್ ಸಿಡ್ನಿ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಸಿಕ್ಸರ್ಸ್ ಪರ ಎಲ್ಲಿಸ್ ಪೆರ್ರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭಿಕಳಾಗಿ ಕಣಕ್ಕಿಳಿದ ಪೆರ್ರಿ 71 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 111 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಸಿಡ್ನಿ ಸಿಕ್ಸರ್ಸ್ ತಂಡವು 20 ಓವರ್ಗಳಲ್ಲಿ 173 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 18 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬ್ರಿಡ್ಜೆಟ್ ಪ್ಯಾಟರ್ಸನ್ 4, 4, 6 ಸಿಕ್ಸ್ ಬಾರಿಸಿದರು. ಈ ಮೂಲಕ ಕೊನೆಯ ಓವ ರ್ನ ಮೊದಲ ಮೂರು ಎಸೆತಗಳಲ್ಲಿ 14 ರನ್ ಕಲೆಹಾಕಿದರು.
ಇನ್ನುಳಿದ ಮೂರು ಎಸೆತಗಳಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ಕೇವಲ 4 ರನ್ ಬೇಕಿತ್ತು. ಈ ವೇಳೆ ಬ್ರಿಡ್ಜೆಟ್ ಪ್ಯಾಟರ್ಸನ್ ಒಂದು ಸಿಂಗಲ್ ತೆಗೆದರು. ಈ ಸಿಂಗಲ್ ಅಡಿಲೇಡ್ ಸ್ಟ್ರೈಕರ್ಸ್ ಪಾಲಿಗೆ ಮುಳುವಾಯಿತು. ಏಕೆಂದರೆ ಕೊನೆಯ ಎರಡು ಎಸೆತಗಳಲ್ಲಿ 3 ರನ್ಗಳು ಬೇಕಿದ್ದಾಗ ಆ್ಯಶ್ಲೆ ಗಾರ್ಡ್ನರ್ ವಿಕೆಟ್ ಪಡೆದರು.
ಇನ್ನು ಕೊನೆಯ ಎಸೆತದಲ್ಲಿ ಸೋಫಿ ಎಕ್ಲೆಸ್ಟೋನ್ 2 ರನ್ಗಳಿಸಲು ಯತ್ನಿಸಿದರೂ ರನೌಟ್ ಆದರು. ಈ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡ ಒಂದು ರನ್ನ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸಿಡ್ನಿ ಸಿಕ್ಸರ್ಸ್ ತಂಡವು ಪ್ಲೇಆಫ್ ಹಂತಕ್ಕೇರಿದೆ.

