Video: ಮೃತ ಯೋಧನ ಮಗಳ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್

Updated on: Aug 24, 2025 | 9:06 AM

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾ, ಉಕ್ರೇನ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡು ಯೋಧರೊಬ್ಬರ ಮಗಳನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ವೈರಲ್ ಆಗಿದೆ. ಮೃತದೇಹಗಳು ಬಂದ ನಂತರ, ಈ ಸೈನಿಕರ ಕುಟುಂಬಗಳ ಸಮ್ಮುಖದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.ಕಿಮ್ ಸೈನಿಕರ ಕುಟುಂಬಗಳನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ, ಅವರು ಸೈನಿಕರ ಕುಟುಂಬಗಳನ್ನು ಭೇಟಿಯಾಗುವಾಗ ಭಾವುಕರಾದರು.

ಉತ್ತರ ಕೊರಿಯಾ, ಆಗಸ್ಟ್​ 24:ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾ, ಉಕ್ರೇನ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡು ಯೋಧರೊಬ್ಬರ ಮಗಳನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ವೈರಲ್ ಆಗಿದೆ. ಮೃತದೇಹಗಳು ಬಂದ ನಂತರ, ಈ ಸೈನಿಕರ ಕುಟುಂಬಗಳ ಸಮ್ಮುಖದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.ಕಿಮ್ ಸೈನಿಕರ ಕುಟುಂಬಗಳನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ, ಅವರು ಸೈನಿಕರ ಕುಟುಂಬಗಳನ್ನು ಭೇಟಿಯಾಗುವಾಗ ಭಾವುಕರಾದರು.ಪ್ಯೊಂಗ್ಯಾಂಗ್‌ನ ಮೊಕ್ರಾನ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಕಿಮ್ ತಮ್ಮ ಸೈನ್ಯವನ್ನು ಶ್ಲಾಘಿಸಿ ಅವರನ್ನು ದೇಶದ ಹೆಮ್ಮೆ ಎಂದು ಕರೆದರು.ಕಿಮ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಗಳ ನಂತರ, ಉತ್ತರ ಕೊರಿಯಾ ಉಕ್ರೇನ್ ಮೇಲಿನ ತನ್ನ ಆಕ್ರಮಣವನ್ನು ಬೆಂಬಲಿಸಲು ರಷ್ಯಾಕ್ಕೆ ಸೈನ್ಯ ಮತ್ತು ಮಿಲಿಟರಿ ಉಪಕರಣಗಳನ್ನು ಕಳುಹಿಸಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ