Hubballi: ಟ್ರಾನ್ಸ್ ಫರ್ ಆದ ಟೀಚರಮ್ಮಗೆ ವಿದಾಯ ಹೇಳಿದ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತರು, ಶಿಕ್ಷಕಿಯ ಕಣ್ಣಲ್ಲೂ ನೀರು!
ಟೀಚರಮ್ಮಗೂ ಭಾವನೆಗಳ ಮೇಲೆ ಹಿಡಿತ ಸಾಧಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ.
ಹುಬ್ಬಳ್ಳಿ: ಸರ್ಕಾರೀ ಶಾಲೆಗಳಲ್ಲಿ ಓದುವ ಮಕ್ಕಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯದ ಬಗ್ಗೆ ನಾವು ಈ ಹಿಂದೆಯೂ ಹೇಳಿದ್ದೇವೆ. ಆ ಬಾಂಧವ್ಯವನ್ನು ಮತ್ತೊಮ್ಮೆ ನಿಮಗೆ ತೋರಿಸುವ ವಿಡಿಯೋವೊಂದು ಹುಬ್ಬಳ್ಳಿಯಿಂದ (Hubballi) ಲಭ್ಯವಾಗಿದೆ. ಇಲ್ಲಿನ ಬಾಲಕಿಯರ ಸರಕಾರೀ ಶಾಲೆಯಲ್ಲಿ ಸಹಶಿಕ್ಷಕಿಯಾಗಿ (assistant teacher) ಕೆಲಸ ಮಾಡುತ್ತಿದ್ದವರ ವರ್ಗಾವಣೆಯಾಗಿದೆ (taransfer) ಮತ್ತು ಅವರನ್ನು ಇಂದು ಬೀಳ್ಕೊಡಲಾಯಿತು. ಆದರೆ ಶಾಲೆಯ ವಿದ್ಯಾರ್ಥಿನಿಯರು ತಮ್ಮ ನೆಚ್ಚಿನ ಟೀಚರ್ತಿಯನ್ನು ಕಳಿಸಲೊಲ್ಲರು. ಮಕ್ಕಳು ಶಿಕ್ಷಕಿಯನ್ನು ಬಹಳ ಹಚ್ಚಿಕೊಂಡಿದ್ದು ವಿಡಿಯೋ ವೀಕ್ಷಿಸುತ್ತಿದ್ದರೆ ಗೊತ್ತಾಗುತ್ತದೆ. ಹೆಚ್ಚಿನ ಸಂಖ್ಯೆಯ ಮಕ್ಕಳು ಬಿಕ್ಕಿ ಬಿಕ್ಕಿ ಆಳುತ್ತಿವೆ. ಟೀಚರಮ್ಮಗೂ ಭಾವನೆಗಳ ಮೇಲೆ ಹಿಡಿತ ಸಾಧಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ಎಮೋಶನಲ್ ದೃಶ್ಯಗಳು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ