Anna Bhagya Scheme: ಅಕ್ಕಿ ಬದಲು ಹಣ ಬೇಡ, ಸಿರಿಧಾನ್ಯಗಳನ್ನು ಸರ್ಕಾರ ನೀಡಲಿ ಎನ್ನುತ್ತಾರೆ ಹುಬ್ಬಳ್ಳಿಯ ಗೃಹಿಣಿ!

Anna Bhagya Scheme: ಅಕ್ಕಿ ಬದಲು ಹಣ ಬೇಡ, ಸಿರಿಧಾನ್ಯಗಳನ್ನು ಸರ್ಕಾರ ನೀಡಲಿ ಎನ್ನುತ್ತಾರೆ ಹುಬ್ಬಳ್ಳಿಯ ಗೃಹಿಣಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 30, 2023 | 1:35 PM

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ನಾಳೆಯಿಂದ ಅನ್ನಭಾಗ್ಯ ಯೋಜನೆ ಜಾರಿಗೊಳ್ಳಲಿದೆ.

ಹುಬ್ಬಳ್ಳಿ: ಅನ್ನಭಾಗ್ಯ ಯೋಜನೆಯಡಿ (Anna Bhagya) ಸರ್ಕಾರಕ್ಕೆ ಅಕ್ಕಿ ಕೊಡುವುದು ಕಷ್ಟವಾಗುತ್ತಿದ್ದರೆ ಅದರ ಬದಲಿ ಸಿರಿಧ್ಯಾನ್ಯಗಳನ್ನು (millets) ನೀಡಲಿ ಎಂದು ಹುಬ್ಬಳ್ಳಿಯ ಗೃಹಿಣಿ ನಾಗಮ್ಮ ಗಂಗೋರ್ ಹೇಳುತ್ತಾರೆ. ಅಕ್ಕಿ ಸಿಗದ ಕಾರಣ ಅದರ ಬದಲು ಸಿದ್ದರಾಮಯ್ಯ ಸರ್ಕಾರ (Siddaramaiah government) ಕೆಜಿಗೆ ರೂ. 34 ರಂತೆ ಹಣ ನೀಡಲು ನಿರ್ಧರಿಸಿದ್ದು ನಾಗಮ್ಮರಂಥ ಹಲವಾರು ಮಹಿಳೆಯರಿಗೆ ಸರಿಯೆನಿಸುತ್ತಿಲ್ಲ. ಹಣ ಕೊಟ್ಟರೆ ಮನೆಯ ಗಂಡಸರು ಕುಡಿತಕ್ಕೆ ಉಪಯೋಗಿಸುತ್ತಾರೆ, ಸರ್ಕಾರದ ಉದ್ದೇಶ ವ್ಯರ್ಥವಾಗುತ್ತದೆ, ಹಾಗಾಗಿ ಹಣದ ಬದಲು ರಾಗಿ, ಬೇಳೆ ಮೊದಲಾದ ಸಿರಿಧಾನ್ಯಗಳನ್ನು ನೀಡಿದರೆ ಉಪಯೋಗವಾಗುತ್ತದೆ ಎಂದು ನಾಗಮ್ಮ ಹೇಳುತ್ತಾರೆ. ಆದರೆ, ರಾಜ್ಯದ ಉಗ್ರಾಣಗಳಲ್ಲಿ ರಾಗಿ ಮತ್ತು ಜೋಳದ ದಾಸ್ತಾನು ಬಹಳ ಕಡಿಮೆ ಪ್ರಮಾಣದಲ್ಲಿದೆ. ಅವರೆಡನ್ನು ತಲಾ ಎರಡೆರಡು ಕೆಜಿಯಂತೆ ಕೊಟ್ಟರೂ ಕೇವಲ 6 ತಿಂಗಳಲ್ಲಿ ಉಗ್ರಾಣಗಳು ಬರಿದಾಗಲಿವೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ನಾಳೆಯಿಂದ ಅನ್ನಭಾಗ್ಯ ಯೋಜನೆ ಜಾರಿಗೊಳ್ಳಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ