Hassan: ಅಕ್ಕಿ ಬದಲು ಹಣ ಕೊಡ್ಲಿ ಬಿಡ್ರೀ, ಸಿದ್ದರಾಮಯ್ಯ ಸರ್ಕಾರ ಒಳ್ಳೇ ಕೆಲಸ ಮಾಡ್ತಿದೆ ಎಂದರು ಹಿರಿಯ ನಾಗರಿಕರೊಬ್ಬರು!
ಸಿದ್ದರಾಮಯ್ಯ ನಮ್ಮ ಹೆಣ್ಣುಮಕ್ಕಳಿಗೆ ಬಸ್ ಪ್ರಯಾಣ ಫ್ರೀ ಮಾಡಿದ್ದಾರೆ, ಮೊದಲು ಯಾರಾದರೂ ಮಾಡಿದ್ರಾ ಎಂದು ಯಜಮಾನರು ಖಾರವಾಗಿ ಪ್ರಶ್ನಿಸಿದರು.
ಹಾಸನ: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ನೀಡಲು ನಿರ್ಧರಿಸಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಕ್ಕಿ ಬದಲು ಹಣ ನೀಡಿದರೆ ಜನ ಮದ್ಯದಂಗಡಿಗೆ (liquor shop) ಹೋಗಿ ಕುಡಿಯಲಾರಂಭಿಸುತ್ತಾರೆ ಅಂತ ಕೆಲವರು ಹೇಳುತ್ತಾರೆ ಆದರೆ ಇನ್ನೂ ಕೆಲವರು ಸರ್ಕಾರದ ಕ್ರಮ ಸರಿ ಎಂದು ಹೇಳುತ್ತಿದ್ದಾರೆ. ಹಾಸನ ಬಸ್ ನಿಲ್ದಾಣದಲ್ಲಿ ಟಿವಿ9 ಕನ್ನಡ ವಾಹಿನಿ ಪ್ರತಿನಿಧಿ ಹಿರಿಯ ವ್ಯಕ್ತಿಯೊಬ್ಬರನ್ನು (senior citizen) ಮಾತಾಡಿಸಿದ್ದು ಅವರು ಸಿದ್ದರಾಮಯ್ಯ ಸರ್ಕಾರವನ್ನು (Siddaramaiah government) ಕೊಂಡಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಯಾವನೋ ಒಬ್ಬ ಹೆಂಡ ಕುಡೀತಾನೆ ಅಂದ್ರೆ ಎಲ್ಲರೂ ಕುಡಿಯುತ್ತಾರಾ? ಅಕ್ಕಿ ಬದಲು ಹಣ ಕೊಡಲಿ ಬಿಡಿ, ರೈತ ಸಂತೋಷಪಡುತ್ತಾನೆ. ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿದ್ದರೆ ಹಣ ಕೊಡುವ ಸ್ಥಿತಿ ಯಾಕೆ ಉದ್ಭವಿಸುತಿತ್ತು? ಸಿದ್ದರಾಮಯ್ಯ ಸರ್ಕಾರ ಒಳ್ಳೇ ಕೆಲಸ ಮಾಡಿದೆ, ಅವರು 7 ಕೆಜಿ ಕೊಡುತ್ತಿದ್ದ ಅಕ್ಕಿಯನ್ನು ಬಿಜೆಪಿ ಸರ್ಕಾರ 4 ಕೆಜಿಗಿಳಿಸಿತು. ಸಿದ್ದರಾಮಯ್ಯ ನಮ್ಮ ಹೆಣ್ಣುಮಕ್ಕಳಿಗೆ ಬಸ್ ಪ್ರಯಾಣ ಫ್ರೀ ಮಾಡಿದ್ದಾರೆ, ಮೊದಲು ಯಾರಾದರೂ ಮಾಡಿದ್ರಾ ಎಂದು ಯಜಮಾನರು ಖಾರವಾಗಿ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ