ಬೆಳಗಾವಿ ಅಧಿವೇಶನ; ಬೆಂಗಳೂರಲ್ಲಿ ಸರ್ಕಾರೀ ಜಾಗ ಅತಿಕ್ರಮಿಸಿದವರ ಮೇಲೆ ಕಠಿಣ ಕ್ರಮ: ಡಿಕೆ ಶಿವಕುಮಾರ್

|

Updated on: Dec 12, 2023 | 12:46 PM

ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಸರ್ಕಾರೀ ಜಮೀನುಗಳ ಅತಿಕ್ರಮಣ ತೆರವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿವೆ ಮತ್ತು ತಮ್ಮ ಸರಕಾರವೂ ಆ ಪ್ರಕ್ರಿಯೆಯನ್ನು ಜಾರಿಯಲ್ಲಿಡುತ್ತದೆ ಎಂದು ಶಿವಕುಮಾರ್ ಹೇಳಿದರು. ಬಿಡಿಎ ಮತ್ತು ಬಿಬಿಎಂಪಿ ಜಾಗಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ಬೆಳಗಾವಿ: ನಿನ್ನೆಯ ಹಾಗೆ ಧರಣಿ, ಕೂಗಾಟ, ಅರಚಾಟಗಳಿಲ್ಲದೆ ಇವತ್ತು ವಿಧಾನ ಸಭಾ ಅಧಿವೇಶನ (Assembly session) ಸಾಂಗವಾಗಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ, ಬಿಡಿಎಗೆ ಸೇರಿದ ಸರ್ಕಾರೀ ಜಮೀನುಗಳ ಒತ್ತುವರಿಯಾಗುತ್ತಿರುವ ಗಂಭೀರ ವಿಚಾರವನ್ನು ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ಇಂದು ಸದನದಲ್ಲಿ ಪ್ರಸ್ತಾಪಿಸಿದರು. ವಾರ್ಡ್ ನಂ. 73 ರಲ್ಲಿ ಒತ್ತುವರಿ ಹಾವಳಿ ಜಾಸ್ತಿಯಾಗಿದೆ, ಕೆರೆ, ಪಾರ್ಕು ಮುಂತಾದವುಗಳಿಗಾಗಿ ಮೀಸಲಾಗಿರುವ ಜಾಗಗಳನ್ನು ಅತಿಕ್ರಮಣ ಮಾಡಲಾಗುತ್ತಿದೆ, ಬೆಂಗಳೂರು ಜಲಮಂಡಳಿಗೆ ಸೇರಿದ ಜಾಗ ಜಿಎಲ್ ಆರ್ ಗೆ ಅಟ್ಯಾಚ್ ಆಗಿದೆ, ಸರಕಾರೀ ಜಾಗಗಳನ್ನು ಅತಿಕ್ರಮಣ ಮಾಡಿದವರು ಎಷ್ಟೇ ಪ್ರಭಾವಿಗಳಾಗಿರಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮುನಿರತ್ನ ಹೇಳಿದರು. ಉತ್ತರ ನೀಡಲು ಎದ್ದು ನಿಂತ ಬೆಂಗಳೂರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ (DK Shivakumar), ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಸರ್ಕಾರೀ ಜಮೀನುಗಳ ಅತಿಕ್ರಮಣ ತೆರವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿವೆ ಮತ್ತು ತಮ್ಮ ಸರಕಾರವೂ ಆ ಪ್ರಕ್ರಿಯೆಯನ್ನು ಜಾರಿಯಲ್ಲಿಡುತ್ತದೆ ಎಂದು ಹೇಳಿದರು. ಬಿಡಿಎ ಮತ್ತು ಬಿಬಿಎಂಪಿ ಜಾಗಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on