ಅಂಬಿಗರ ಚೌಡಯ್ಯನವರ ವಚನಗಳು ಇವತ್ತಿಗೂ ಪ್ರಸ್ತುತ ಮತ್ತು ಸರ್ವಕಾಲಿಕ ಸತ್ಯ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಅಂಬಿಗರ ಚೌಡಯ್ಯನವರ ವಚನಗಳು ಇವತ್ತಿಗೂ ಪ್ರಸ್ತುತ ಮತ್ತು ಸರ್ವಕಾಲಿಕ ಸತ್ಯ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 15, 2024 | 4:57 PM

ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಕೇಂದ್ರ ಸಚಿವ ಜೋಶಿ , ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಹೇಳಿದ್ದನ್ನು ಭಾಷಣದಲ್ಲಿ ಉಲ್ಲೇಖಿಸಿದರು. ನಮ್ಮಲ್ಲಿ ವ್ಯಕ್ತಿಗತವಾಗಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ದ್ವೇಷ ಇರಬಾರದು ಅಂತ ಸಿದ್ದರಾಮಯ್ಯ ಈಗಷ್ಟೇ ತನಗೆ ಹೇಳಿದರು ಎಂದು ಜೋಶಿ ಸಭೆಗೆ ತಿಳಿಸಿದರು.

ಹಾವೇರಿ: ಆದಿಕಾಲದಿಂದಲೂ ನಮ್ಮ ದೇಶದಲ್ಲಿ ವ್ಯಕ್ತಿಯೊಬ್ಬನನ್ನು ಅವನ ಜಾತಿಯ ಆಧಾರದಲ್ಲಿ ಗುರುತಿಸುವ ಸಂಪ್ರದಾಯ ಯಾವತ್ತೂ ಇರಲಿಲ್ಲ, ಮಹಾಭಾರತ ಮತ್ತು ರಾಮಾಯಣದಲ್ಲೂ ಈ ಅಂಶವನ್ನು ಸ್ಪಷ್ಟವಾಗಿ ಗುರುತಿಸಬಹುದು, ರಾಮಾಯಣದಲ್ಲಿ ರಾವಣನೇ (Ravan) ದೊಡ್ಡ ಖಳನಾಯನಾದರೂ ಅವನು ಉಚ್ಛ ಜಾತಿಗೆ ಸೇರಿದವನು, ರಾಮ (Ram) ಉಚ್ಛಜಾತಿಗೆ ಸೇರಿದವನಲ್ಲ, ಆದರೆ ನಮ್ಮ ನಾಡಿನಲ್ಲಿ ಪೂಜಿಸಲ್ಪಡೋದು ರಾಮನೇ ಹೊರತು ರಾವಣನಲ್ಲ, ಕೇವಲ ಕುಲೀನ ಜಾತಿಗೆ ಸೇರಿದವರನ್ನು ಆರಾಧಿಸಬೇಕೆಂಬ ಪರಿಪಾಠ ನಮ್ಮಲ್ಲಿಲ್ಲ ಎಂಬ ಅತ್ಯಂತ ಗಹನವಾದ ಅಂಶವನ್ನು ಅಂಬಿಗರ ಚೌಡಯ್ಯ ತಮ್ಮ ವಚನಗಳಲ್ಲಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನರಸೀಪುರದಲ್ಲಿ ಆಯೋಜಿಸಿದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತನಗೆ ಹೇಳಿದ್ದನ್ನು ಭಾಷಣದಲ್ಲಿ ಉಲ್ಲೇಖಿಸಿದರು. ನಮ್ಮಲ್ಲಿ ವ್ಯಕ್ತಿಗತವಾಗಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ದ್ವೇಷ ಇರಬಾರದು ಅಂತ ಸಿದ್ದರಾಮಯ್ಯ ಈಗಷ್ಟೇ ತನಗೆ ಹೇಳಿದರು ಎಂದು ಜೋಶಿ ಸಭೆಗೆ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ