ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಅಕ್ಕಿಕಾಳಿನ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿದೆ: ಮುನಿರತ್ನ ನಾಯ್ಡು

Updated on: Jan 08, 2024 | 5:46 PM

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಬರೀ ಘೋಷಣೆ ಮಾಡಿದೆ ಅಷ್ಟೇ, ಕೋಡೋದಿಕ್ಕೆ ಅದರ ಬಳಿ ಅಕ್ಕಿ ಎಲ್ಲಿದೆ? ಅಕ್ಕಿಯ ಹೆಸರಲ್ಲಿ ಕಾರ್ಡುದಾರರಿಗೆ 5 ಕೇಜಿಗಾಗುವಷ್ಟು ಹಣವನನ್ನು ನೀಡಲಾಗುತ್ತಿದೆ. ಅವರಲ್ಲಿ ಅಕ್ಕಿ ಇಲ್ಲವೇ ಇಲ್ಲ, ಹಾಗಾಗೇ ಜನರಿಗೆ ಹಣ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಮುನಿರತ್ನ ಹೇಳಿದರು.

ಬೆಂಗಳೂರು: ರಾಮನ ಹೆಸರಲ್ಲಿ ಮಂತ್ರಾಕ್ಷತೆ ಅಂತ ಬಿಜೆಪಿ ನಾಯಕರು (BJP leaders) ಮನೆಮನೆಗಳಿಗೆ ಹಂಚುತ್ತಿರುವುದು ಅನ್ನಭಾಗ್ಯ ಯೋಜನೆಯ ಅಕ್ಕಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗೇಲಿ ಮಾಡಿರುವುದಕ್ಕೆ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ಖಡಕ್ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಯಾವ ಅಕ್ಕಿಯ ಬಗ್ಗೆ ಮಾತಾಡುತ್ತಿದ್ದಾರೆ ಅಂತ ಅವರಿಗೂ ಗೊತ್ತಿದ್ದಂತಿಲ್ಲ. ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಹಂಚುತ್ತಿದೆಯಾ? ಈಗ ಅವರು ಹಂಚುತ್ತಿರೋದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿ. ಆ ಅಕ್ಕಿಯ ಪ್ರತಿಕಾಳಿನ ಮೇಲೆ ಮೋದಿ ಅವರ ಹೆಸರು ಬರೆದಿದೆ ಎಂದು ರಾಜರಾಜೇಶ್ವರಿನ ನಗರದ ಶಾಸಕ ಹೇಳಿದರು. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಬರೀ ಘೋಷಣೆ ಮಾಡಿದೆ ಅಷ್ಟೇ, ಕೋಡೋದಿಕ್ಕೆ ಅದರ ಬಳಿ ಅಕ್ಕಿ ಎಲ್ಲಿದೆ? ಅಕ್ಕಿಯ ಹೆಸರಲ್ಲಿ ಕಾರ್ಡುದಾರರಿಗೆ 5 ಕೇಜಿಗಾಗುವಷ್ಟು ಹಣವನನ್ನು ನೀಡಲಾಗುತ್ತಿದೆ. ಅವರಲ್ಲಿ ಅಕ್ಕಿ ಇಲ್ಲವೇ ಇಲ್ಲ, ಹಾಗಾಗೇ ಜನರಿಗೆ ಹಣ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಮುನಿರತ್ನ ಹೇಳಿದರು.

ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More