ಸಂಗೀತಾ ಮುಖಕ್ಕೆ ಹೊಡೆದಂತೆ ಮಾತಾಡಿದ ಕಾರ್ತಿಕ್; ಇಷ್ಟು ದಿನ ತಡೆದಿದ್ದ ಆಕ್ರೋಶ ಸ್ಫೋಟ
ಗೆಳೆತನವನ್ನು ಸಂಗೀತಾ ಶೃಂಗೇರಿ ಉಪಯೋಗಿಸಿಕೊಂಡಿದ್ದಾರೆ ಎಂದು ಕಾರ್ತಿಕ್ ಮಹೇಶ್ ಆರೋಪ ಮಾಡಿದ್ದಾರೆ. ಈ ವಿಚಾರದಲ್ಲಿ ಇಷ್ಟು ದಿನ ತಡೆದಿಟ್ಟುಕೊಂಡಿದ್ದ ಆಕ್ರೋಶವನ್ನು ಅವರು ಈಗ ಹೊರಹಾಕಿದ್ದಾರೆ. ಯಾವ ಮುಲಾಜೂ ಇಲ್ಲದೇ ಸಂಗೀತಾ ಮುಖಕ್ಕೆ ಹೊಡೆದಂತೆ ಕಾರ್ತಿಕ್ ಮಾತನಾಡಿದ್ದಾರೆ.
ಎಷ್ಟೇ ಪ್ರಯತ್ನಿಸಿದರೂ ಕೂಡ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ (Karthik Mahesh) ನಡುವಿನ ಕಿರಿಕ್ ಬಗೆಹರಿಯುತ್ತಿಲ್ಲ. ಮೊದಲು ಬಹಳ ಕ್ಲೋಸ್ ಆಗಿದ್ದ ಅವರು ನಂತರ ಶತ್ರುಗಳಂತೆ ವರ್ತಿಸಲು ಆರಂಭಿಸಿದರು. ಕೆಲವೊಮ್ಮೆ ರಾಜಿ, ಸಂಧಾನ ನಡೆದಿದ್ದೂ ಉಂಟು. ಆದರೂ ಕೂಡ ಅವರ ನಡುವಿನ ಮುನಿಸು ಕೊನೆ ಆಗಿಲ್ಲ. ಬಿಗ್ ಬಾಸ್ (Bigg Boss Kannada) ಫಿನಾಲೆ ಹತ್ತಿರ ಆಗುತ್ತಿದೆ. ಈ ಸಮಯದಲ್ಲಿ ಕಾರ್ತಿಕ್ ಮಹೇಶ್ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಅವರು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಗೆಳೆತನವನ್ನು ಸಂಗೀತಾ ಉಪಯೋಗಿಸಿಕೊಂಡಿದ್ದಾರೆ ಎಂಬುದು ಕಾರ್ತಿಕ್ ಆರೋಪ. ಈ ವಿಚಾರದಲ್ಲಿ ಇಷ್ಟು ದಿನ ತಡೆದಿಟ್ಟುಕೊಂಡಿದ್ದ ಆಕ್ರೋಶವನ್ನು ಅವರು ಈಗ ಹೊರಹಾಕಿದ್ದಾರೆ. ಯಾವ ಮುಲಾಜೂ ಇಲ್ಲದೇ ಸಂಗೀತಾ ಮುಖಕ್ಕೆ ಹೊಡೆದಂತೆ ಕಾರ್ತಿಕ್ ಮಾತನಾಡಿದ್ದಾರೆ. ಜನವರಿ 8ರ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. 24 ಗಂಟೆಯೂ ಉಚಿತವಾಗಿ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ