ದುರ್ಘಟನೆಗೆ ಬಲಿಯಾದ ಮೂರು ಅಭಿಮಾನಿಗಳ ಕುಟುಂಬಗಳನ್ನು ಸಂತೈಸಲು ಆಗಮಿಸಿದ ನಟ ಯಶ್

ದುರ್ಘಟನೆಗೆ ಬಲಿಯಾದ ಮೂರು ಅಭಿಮಾನಿಗಳ ಕುಟುಂಬಗಳನ್ನು ಸಂತೈಸಲು ಆಗಮಿಸಿದ ನಟ ಯಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 08, 2024 | 6:29 PM

ಯಶ್ ಅತುರದಲ್ಲಿ, ಬೇಗ ಬೇಗ ಹೆಜ್ಜೆ ಹಾಕುತ್ತಾ ನಿಲ್ದಾಣದಿಂದ ಹೊರಬರುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳು ಬೈಟ್ ಗಾಗಿ ಅವರ ಮೇಲೆ ಮುಗಿಬೀಳುವುದು ಸರಿಯೆನಿಸಲಿಲ್ಲ. ಅವರು ಯಾವ ಕೆಲಸಕ್ಕೆ ಬಂದಿದ್ದಾರೆನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯಶ್ ಗೆ ಸೂರಣಗಿಯ ಹಣಮಂತು, ನವೀನ್ ಮತ್ತು ಮುರಳಿಯವರ ಕುಟುಂಬಗಳನ್ನು ಭೇಟಿಯಾಗಿ ಸಂತೈಸುವುದು ಮುಖ್ಯವಾಗಿದೆ ಮತ್ತು ಮೊದಲ ಆದ್ಯತೆಯಾಗಿದೆ.

ಹುಬ್ಬಳ್ಳಿ: ಚಿತ್ರನಟ ಯಶ್ (actor Yash) ಹುಟ್ಟುಹಬ್ಬದ ಪ್ರಯುಕ್ತ ಕಳೆದ ರಾತ್ರು ಕಟೌಟ್ ಕಟ್ಟುವ ಪ್ರಯತ್ನದಲ್ಲಿದ್ದಾಗ ದುರ್ಘಟನೆ ನಡೆದು ಮೂವರು ಯುವಕರು (three youth) ಮೃತಪಟ್ಟರೂ ನಟನಿಂದ ಪ್ರತಿಕ್ರಿಯೆ ಬಾರದಿರುವ ಬಗ್ಗೆ ನಾವು ಇಂದು ಮಧ್ಯಾಹ್ನ ಆಕ್ಷೇಪಣೆ ವ್ಯಕ್ತಪಡಿಸಿದ್ದೆವು. ಆದರೆ, ಯಶ್ ಬೆಂಗಳೂರಿದ ಗದಗ ಜಿಲ್ಲೆಯ ಸೂರಣಗಿಗೆ (Suranagi in Gadag) ಧಾವಿಸಿ ಬಂದು ಮಾನವೀಯತೆ ಮೆರೆದಿದ್ದಾರೆ. ಯಶ್ ವಿಮಾನವೊಂದರ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರು ಅತುರದಲ್ಲಿ, ಬೇಗ ಬೇಗ ಹೆಜ್ಜೆ ಹಾಕುತ್ತಾ ನಿಲ್ದಾಣದಿಂದ ಹೊರಬರುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳು ಬೈಟ್ ಗಾಗಿ ಅವರ ಮೇಲೆ ಮುಗಿಬೀಳುವುದು ಸರಿಯೆನಿಸಲಿಲ್ಲ. ಅವರು ಯಾವ ಕೆಲಸಕ್ಕೆ ಬಂದಿದ್ದಾರೆನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯಶ್ ಗೆ ಸೂರಣಗಿಯ ಹಣಮಂತು, ನವೀನ್ ಮತ್ತು ಮುರಳಿಯವರ ಕುಟುಂಬಗಳನ್ನು ಭೇಟಿಯಾಗಿ ಸಂತೈಸುವುದು ಮುಖ್ಯವಾಗಿದೆ. ಅವರನ್ನು ಭೇಟಿಯಾದ ಮೇಲೆ ಖಂಡಿತವಾಗಿಯೂ ಮಾಧ್ಯಮದವರೊಂದಿಗೆ ಮಾತಾಡುತ್ತಾರೆ ಅದರಲ್ಲೇನೂ ಸಂದೇಹ ಬೇಡ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಅವರು ತಮ್ಮ ಕುಟುಂಬವನ್ನು ಬಿಟ್ಟು ದೂರದ ಗದಗಿಗೆ ಬಂದಿದ್ದಾರೆ. ಅವರ ಧೋರಣೆ, ಪ್ರವೃತ್ತಿ ಮತ್ತು ತನ್ನ ಅಭಿಮಾನಿಗಳ ಬಗ್ಗೆ ಇಟ್ಟುಕೊಂಡಿರುವ ಕಾಳಜಿ ಮತ್ತು ಪ್ರೀತಿಯನ್ನು ಅಭಿನಂದಿಸಬೇಕು.

ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ