ಸೂರಣಗಿ ಗ್ರಾಮದಲ್ಲಿ ಮೃತರನ್ನು ಮಕ್ಕಳು ಎಂದು ಸಂಬೋಧಿಸಿ ಜಿಲ್ಲಾಧಿಕಾರಿ ವೈಶಾಲಿ ಮಾತೃಹೃದಯ ಪ್ರದರ್ಶಿಸಿದರು!
ಮತ್ತೊಂದು ಸ್ವಾಗತಕಾರಿ ಬೆಳವಣಿಗೆಯೆಂದರೆ, ಚಿತ್ರನಟ ಯಶ್ ಸೂರಣಗಿ ಗ್ರಾಮಕ್ಕೆ ಇವತ್ತೇ ಭೇಟಿ ನೀಡಲಿದ್ದು, ಹಣಮಂತು, ನವೀನ್ ಮತ್ತು ಮುರಳಿಯವರ ಕುಟುಂಬಗಳೊಂದಿಗೆ ಮಾತಾಡಲಿದ್ದಾರೆ. ನಟನ ಆಪ್ತರು ಪಯಾಣದ ವ್ಯವಸ್ಥೆ ಮಾಡಿದ್ದಾರೆ, ಮತ್ತು ಅವರು ನೀಡಿರುವ ಸುಳಿವಿನ ಪ್ರಕಾರ ಮೂರು ಕುಟುಂಬಗಳಿಗೂ ನಟ ಧನ ಸಹಾಯ ಮಾಡಲಿದ್ದಾರೆ.
ಗದಗ: ಇಲ್ಲಿನ ಜಿಲ್ಲಾಧಿಕಾರಿ ವೈಶಾಲಿ ಎಂಎಲ್ (Vaishali ML) ಎಲ್ಲಿಯವರು ಅಂತ ಎಲ್ಲಿಯವರು ಅಂತ ಗೊತ್ತಿಲ್ಲ ಆದರೆ ಗಮನಿಸಬೇಕಾದ ಸಂಗತಿಯೆಂದರೆ, ಅವರಲ್ಲಿ ಮಾತೃ ಹೃದಯವಿದೆ, ಕಷ್ಟದಲ್ಲಿರುವವವರಿಗೆ ಮಿಡಿಯುವ ಗುಣವಿದೆ. ಕಳೆದ ರಾತ್ರಿ ಸೂರಣಗಿಯಲ್ಲಿ (Suranagi) ನಡೆದ ಘಟನೆ ಈಗಾಗಲೇ ವಿಸ್ತೃತವಾಗಿ ವರದಿಯಾಗಿದೆ. ಇಂದು ಆ ಗ್ರಾಮಕ್ಕೆ ತೆರಳಿದ ವೈಶಾಲಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಹೆತ್ತವರ ಮತ್ತು ಸಂಬಂಧಿಕೆ ಗೋಳಾಟ ಜಿಲ್ಲಾಧಿಕಾರಿಯನ್ನು ವಿಚಲಿತಗೊಳಿಸಿತ್ತು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮೃತ ಹಣಮಂತು (Hanumanthu), ನವೀನ್ (Naveen) ಮತ್ತು ಮುರಳಿಯನ್ನು (Murali) ಮಕ್ಕಳು ಅಂತ ಸಂಬೋಧಿಸಿದರು. ಕುಟುಂಬಗಳಿಗೆ ಇದು ತುಂಬಲಾಗದ ನಷ್ಟ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೆಚ್ ಕೆ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕುಟುಂಬಗಳ ಪರಿಹಾರ ಒದಗಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರ ಮೃತರ ಕುಟುಬಗಳಿಗೆ ತಲಾ ರೂ. 2 ಲಕ್ಷ ಮತ್ತು ಗಾಯಗೊಂಡಿರುವವರಿಗೆ ತಲಾ ರೂ. 50,000 ಪರಿಹಾರ ಘೋಷಿಸಿದೆ. ಸೂರಣಗಿಯಲ್ಲಿ ಒಬ್ಬ ಖಾಯಂ ವೈದ್ಯನ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ವೈಶಾಲಿ ಹೇಳಿದರು,
ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ