AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಹುಟ್ಟುಹಬ್ಬ ದುರಂತ: ಮೃತ ಮೂವರು ದುರ್ದೈವಿಗಳ ಅಂತಿಮಸಂಸ್ಕಾರ ಒಟ್ಟಿಗೆ ನೆರವೇರಿಸಿದ ಸೂರಣಗಿ ಗ್ರಾಮಸ್ಥರು

ಯಶ್ ಹುಟ್ಟುಹಬ್ಬ ದುರಂತ: ಮೃತ ಮೂವರು ದುರ್ದೈವಿಗಳ ಅಂತಿಮಸಂಸ್ಕಾರ ಒಟ್ಟಿಗೆ ನೆರವೇರಿಸಿದ ಸೂರಣಗಿ ಗ್ರಾಮಸ್ಥರು

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jan 08, 2024 | 1:54 PM

Share

ಚಿತ್ರನಟ ಯಶ್ ಏನಾದರೂ ನೆರವಿಗೆ ಧಾವಿಸಬಹುದೇ? ಜನ ಆ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಆದರೆ, ಸೋಜಿಗ ಮತ್ತು ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ತನ್ನ ಅಭಿಮಾನಿಗಳ ಸಾವಿನ ಬಗ್ಗೆ ನಟ ಯಶ್ ಇದುವರೆಗೆ ಪ್ರತಿಕ್ರಿಯೆ ನೀಡದಿರುವುದು! ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಈ ಪರಿ ಸಂವೇದನೆರಹಿತರಾದರೆ? ದಯವಿಟ್ಟು ಮಾತಾಡಿ ಸ್ವಾಮಿ, ನಿಮ್ಮ ಹುಟ್ಟುಹಬ್ಬ ಪ್ರತಿವರ್ಷ ಬರುತ್ತದೆ, ಅದರೆ ನಿಮ್ಮ ಅಭಿಮಾನಿಗಳ ಪ್ರಾಣಗಳು ಯಾವತ್ತೂ ವಾಪಸ್​ ಬರಲಾರವು.

ಗದಗ: ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಯಶ್ (cine actor Yash) ಅವರ ಕಟೌಟ್ ಊರಿನ ಬೀದಿಯೊಂದರಲ್ಲಿ ಕಟ್ಟುವಾಗ ದುರ್ಮರಣಕ್ಕೀಡಾದ ಮೂವರು ಯುವಕರ ಅಂತಿಮ ಸಂಸ್ಕಾರದಲ್ಲಿ ಇಡೀ ಸೂರಣಗಿ ಗ್ರಾಮವಲ್ಲದೆ (residents of Suranagi) ಸುತ್ತಮುತ್ತಲಿನ ಊರುಗಳ ಜನ ಸಹ ಭಾಗಿಯಾಗಿದ್ದರು. ವಿದ್ಯುತ್ ಪ್ರವಹಿಸಿ ಸಾವಿಗೀಡಾದ ಹಣಮಂತ ಹರಿಜನ (Hanumantha Harijan), ಮುರಳಿ ನಡುವಿನಮನಿ (Murali Naduvinamani) ಮತ್ತು ನವೀನ್ (Naveen) ತಮ್ಮ ತಮ್ಮ ಕುಟುಂಬಗಳ ಆಧಾರ ಸ್ತಂಭವಾಗಿದ್ದರು, ಇವರ ದುಡಿತದಿಂದಲೇ ಅವರ ಮನೆಗಳು ನಡೆಯುತ್ತಿದ್ದವು ಎಂದು ಟಿವಿ ಗದಗ ವರದಿಗಾರ ಮಾಹಿತಿ ನೀಡಿದ್ದಾರೆ. ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿದರೂ ಆ ಹಣದಿಂದ ಅವರು ಎಷ್ಟು ದಿನ ಬದುಕಿನ ಬಂಡಿ ಎಳೆದೊಯ್ಯಬಹುದು? ಚಿತ್ರನಟ ಯಶ್ ಏನಾದರೂ ನೆರವಿಗೆ ಧಾವಿಸಬಹುದೇ? ಜನ ಆ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಆದರೆ, ಸೋಜಿಗ ಮತ್ತು ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ತನ್ನ ಅಭಿಮಾನಿಗಳ ಸಾವಿನ ಬಗ್ಗೆ ನಟ ಯಶ್ ಇದುವರೆಗೆ ಪ್ರತಿಕ್ರಿಯೆ ನೀಡದಿರುವುದು! ದೃಶ್ಯಗಳಲ್ಲಿ ಕಾಣುವ ಹಾಗೆ ಮೂವರ ಕಳೇಬರಗಳ ಅಂತ್ಯ ಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಲಾಯಿತು. ಕುಟುಂಬಸ್ಥರ ಆಕ್ರಂದನ ಕರಳು ಕಿವುಚುತ್ತದೆ.

ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.