Hubli: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿನ ರಾಹುಲ್​ ಗಾಂಧಿಯನ್ನ ಸ್ವಾಗತಿಸಿದ ಜಗದೀಶ್​ ಶೆಟ್ಟರ್​

|

Updated on: Apr 23, 2023 | 2:17 PM

ದೆಹಲಿಯಿಂದ-ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಹುಲ್​ ಗಾಂಧಿಯವರನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್​​ ಶೆಟ್ಟರ್ ಅವರು​ ಸ್ವಾಗತಿಸಿದರು.

ಹುಬ್ಬಳ್ಳಿ: ದೆಹಲಿಯಿಂದ-ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಹುಲ್​ ಗಾಂಧಿಯವರನ್ನು (Rahul Gandhi) ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ವಿಧಾನಸಭಾ ಕ್ಷೇತ್ರದ (Hubli-Dharwad Central Constituency) ಕಾಂಗ್ರೆಸ್​ (Congress) ಅಭ್ಯರ್ಥಿ ಜಗದೀಶ್​​ ಶೆಟ್ಟರ್ (Jagadish Shettar) ಅವರು​ ಸ್ವಾಗತಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರು ಕೂಡಲ ಸಂಗಮಕ್ಕೆ ಹೋಗುವ ಹಿನ್ನಲೆ ಹುಬ್ಬಳ್ಳಿ ಏರಪೋರ್ಟ್​ಗೆ ಬಂದಿದ್ದರು. ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಲಿಂಗಾಯತ ಸಮುದಾಯ ವಿಚಾರದ ಬಗ್ಗೆಯೂ ಚರ್ಚೆ ಆಗಿದೆ. ನಾಳೆ ಹಾನಗಲ್ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ, ನಾನು ಹೋಗುತ್ತೇನೆ ಎಂದು ತಿಳಿಸಿದರು.

Published on: Apr 23, 2023 02:17 PM