DK Shivakumar: ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಮಾಡುವ ಚಂಡಿಕಾಯಾಗ ಮಾಡಿಸುತ್ತಿರುವ ಡಿಕೆ ಶಿವಕುಮಾರ್

DK Shivakumar: ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಮಾಡುವ ಚಂಡಿಕಾಯಾಗ ಮಾಡಿಸುತ್ತಿರುವ ಡಿಕೆ ಶಿವಕುಮಾರ್

ಆಯೇಷಾ ಬಾನು
|

Updated on:Apr 23, 2023 | 3:23 PM

ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಡಿಕೆಶಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ. ಉಡುಪಿಯ ಜ್ಯೋತಿಷಿ ದ್ವಾರಕನಾಥ್ ಸಲಹೆಯಂತೆ 15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ.

ರಾಜ್ಯ ವಿಧಾನಸಬಾ ಚುನಾವಣೆ ಹೊತ್ತಲ್ಲೇ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಡಿಕೆಶಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ. ಉಡುಪಿಯ ಜ್ಯೋತಿಷಿ ದ್ವಾರಕನಾಥ್ ಸಲಹೆಯಂತೆ 15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಚಂಡಿಕಾಯಾಗ ಮಾಡಿಸುತ್ತಿದ್ದಾರೆ. ಒಂದೇ ತಿಂಗಳಲ್ಲಿ 2 ಬಾರಿ ಡಿಕೆಶಿ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಅಧಿಕಾರಕ್ಕಾಗಿ ರಾಜರು ಚಂಡಿಕಾಯಾಗ ನಡೆಸುತ್ತಿದ್ದರು. ಈಗ ಸಿಎಂ ಕುರ್ಚಿಗಾಗಿ ಶಕ್ತಿ ಪೀಠದಲ್ಲಿ ಡಿಕೆಶಿ ಯಾಗದ ಮೊರೆ ಹೋಗಿದ್ದಾರೆ. ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಯಾಗ ಮಾಡಲಾಗಿದೆ. ಇನ್ನು 2018ರ ಚುನಾವಣೆಯಲ್ಲಿ ಹೆಚ್​​​ಡಿ ದೇವೇಗೌಡರ ಕುಟುಂಬ ಚಂಡಿಕಾಯಾಗ ಮಾಡಿಸಿತ್ತು. ಸಿಎಂ ಆಗುವ ಮುನ್ನ ಹೆಚ್​ಡಿ ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆದಿದ್ದರು.

Published on: Apr 23, 2023 03:23 PM