‘ಅಭಿಮಾನಿಗಳ ಪ್ರೀತಿ ನೋಡಿ ಮಾತುಗಳೇ ಬರುತ್ತಿಲ್ಲ’: ಬರ್ತ್ಡೇ ಸಂಭ್ರಮದಲ್ಲಿ ಯುವ ರಾಜ್ಕುಮಾರ್
Yuva Rajkumar birthday: ಸಿನಿಮಾ ಶೂಟಿಂಗ್ಗೆ ಬಿಡುವು ನೀಡಿ ಯುವ ರಾಜ್ಕುಮಾರ್ ಅವರು ಹುಟ್ಟುಹಬ್ಬದ ಸಡಗರದಲ್ಲಿ ಭಾಗಿ ಆಗಿದ್ದಾರೆ. ಅಭಿಮಾನಿಗಳ ಪ್ರೀತಿ ಕಂಡು ಅವರಿಗೆ ಖುಷಿ ಆಗಿದೆ.
ನಟ ಯುವ ರಾಜ್ಕುಮಾರ್ (Yuva Rajkumar) ಅವರು ಇಂದು (ಏಪ್ರಿಲ್ 23) ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬ (Yuva Rajkumar birthday) ಆಚರಿಸಲು ನೂರಾರು ಅಭಿಮಾನಿಗಳು ಮನೆಗೆ ಬಂದಿದ್ದರು. ಎಲ್ಲರ ಪ್ರೀತಿ ಕಂಡು ಯುವ ರಾಜ್ಕುಮಾರ್ ಖುಷಿಯಾಗಿದ್ದಾರೆ. ‘ಫ್ಯಾನ್ಸ್ ಪ್ರೀತಿಯ ಬಗ್ಗೆ ಮಾತಲ್ಲಿ ಹೇಳೋಕೆ ಆಗಲ್ಲ. ಅವರು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಇರುತ್ತಾರೆ. ಅಭಿಮಾನಿಗಳು ಕೂಡ ನಮ್ಮ ಮನೆಯವರ ರೀತಿ’ ಎಂದು ಯುವ ರಾಜ್ಕುಮಾರ್ ಹೇಳಿದ್ದಾರೆ. ‘ಯುವ’ (Yuva Movie) ಸಿನಿಮಾದ ಶೂಟಿಂಗ್ಗೆ ಬಿಡುವು ನೀಡಿ ಅವರು ಹುಟ್ಟುಹಬ್ಬದ ಸಡಗರದಲ್ಲಿ ಭಾಗಿ ಆಗಿದ್ದಾರೆ. ಈ ಸಿನಿಮಾ ಡಿಸೆಂಬರ್ನಲ್ಲಿ ರಿಲೀಸ್ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Apr 23, 2023 02:49 PM
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

