ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ…!

Edited By:

Updated on: Apr 21, 2025 | 4:24 PM

ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ( ಡಿಜಿ & ಐಜಿಪಿ) ಓಂ ಪ್ರಕಾಶ್​​ ಪತ್ನಿಯಿಂದಲೇ ಕೊಲೆಯಾಗಿದೆ. ಇನ್ನು ಓಂ ಪ್ರಕಾಶ್ ಕೊಲೆಗೆ ಆಸ್ತಿ ಕಲಹವೂ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ ಮಧ್ಯದಲ್ಲಿ ಓಂ ಪ್ರಕಾಶ್ ಅವರು ಅದ್ಭುತವಾದ ಫಾರ್ಮ್​ ಹೌಸ್​ ಹೊಂದಿದ್ದಾರೆ. ಹಾಗಾದ್ರೆ, ಆ ಫಾರ್ಮ್​ ಹೌಸ್ ಹೇಗಿದೆ? ಇದೇ ಫಾರ್ಮ್​ ಹೌಸ್​ ಓಂ ಪ್ರಕಾಶ್​​ ಬಲಿಯಾದರೆ?

ಉತ್ತರ ಕನ್ನಡ, (ಏಪ್ರಿಲ್ 21): ಸುತ್ತಲೂ ಕಾಡು.. ಮಧ್ಯೆ ಕಾಳಿ ನದಿ.. ನದಿಯ ಪಕ್ಕದಲ್ಲೇ ಅಡ್ವೆಂಚರ್ ಝೋನ್.. ನದಿಯಲ್ಲಿ ರಿವರ್ ರಾಫ್ಟಿಂಗ್.. ಸದ್ಯ ಕರ್ನಾಟಕದ ಮಾಜಿ ಡಿಜಿ & ಐಜಿಪಿ ಓಂ ಪ್ರಕಾಶ್​ ಕೊಲೆ ಪ್ರಕರಣದ ಬಳಿಕ ಇದೇ, ಜಾಗ ದೊಡ್ಡ ಸದ್ದು ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸೂಪಾ ತಾಲೂಕಿನ ಜೋಯಿಡಾ ( ಸೂಪಾ) ತಾಲೂಕಿನ ದಟ್ಟ ಅರಣ್ಯದಲ್ಲಿ ಓಂ ಪ್ರಕಾಶ ಅವರ ಫಾರ್ಮ್ ಹೌಸ್ ಇದೆ. ಅತ್ಯದ್ಬುತ ನಿಸರ್ಗದಲ್ಲಿ 2.20 ಏಕರೆ ಜಮೀನಿನಲ್ಲಿನ ಫಾರ್ಮ್ ಹೌಸ್ ಹೊಂದಿದ್ದಾರೆ. ದಟ್ಟವಾದ ಗಿಡ ಮರಗಳ ಮಧ್ಯದಲ್ಲಿನ ಮನೆ ಅತ್ಯದ್ಭುತವಾಗಿದೆ. ಮೂರು ರೂಮ್​ಗಳ ಸುಂದರವಾದ ಫಾರ್ಮ್ ಹೌಸ್​ನಲ್ಲಿ ಸ್ವಿಮಿಂಗ್ ಫುಲ್, ವಾಚ್ ಟವರ್ ಕೂಡ ಇದೆ. ಹಾಗೇ ಬಾಳೆ, ಮಾವು, ಕಾಳಮೆಣಸು, ಶ್ರೀಗಂಧ, ವೀಳ್ಯದೆಲೆ ಹೀಗೆ ಹತ್ತಾರು ಬಗೆಯ ಗಿಡ ಮರಗಳನ್ನ ಫಾರ್ಮ್​ ಹೌಸ್​ನ್ಲಲಿ ಬೆಳಸಲಾಗಿದೆ.

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More