ಮಂಡ್ಯ: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲುಕಂಡಿದೆ. ಘಟಾನುಘಟಿ ಸಚಿವರುಗಳೇ ಪರಾಭವಗೊಂಡಿದ್ದಾರೆ. ಅದರಲ್ಲಿ ಕೆಸಿ ನಾರಾಯಣಗೌಡ ಕೂಡ ಒಬ್ಬರು. ಮಂಡ್ಯದ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕೆಸಿ ನಾರಾಯಣಗೌಡ ಸೋತಿತ್ತಿದ್ದಾರೆ. ಇದೀಗ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಕೆಸಿ ನಾರಾಯಣಗೌಡ ಆಡಿರುವ ಮಾತುಗಳು ಇದೀಗ ಫುಲ್ ವೈರಲ್ ಆಗಿದೆ. ಹೌದು.. ಸರಿಯಾಗಿ ಹಣ ಹಂಚದ ಕಾರಣ ಈ ಚುನಾವಣೆಯಲ್ಲಿ ಸೋಲಾಗಿದೆ. ಚುನಾವಣೆ ವೇಳೆ ನಾನು ಕೊಟ್ಟಿದ್ದ ಹಣವನ್ನು ಕೆಲವರು ಮತದಾರರಿಗೆ ಹಂಚಿಕೆ ಮಾಡಿಲ್ಲ. ಅಂತಹವರು ಹಣ ಇಟ್ಟುಕೊಂಡಿದ್ದರೆ ನಮ್ಮ ಟ್ರಸ್ಟ್ಗೆ ತಂದು ಕೊಡಿ ಎಂದಿದ್ದು, ಇದೀಗ ಈ ಹೇಳಿಕೆ ವೈರಲ್ ಆಗಿದೆ. ಚುನಾವಣೆಯಲ್ಲಿ ನಾನು ಸೋತಿದ್ದೇನೆ ಎಂದು ಕ್ಷೇತ್ರ ಬಿಟ್ಟು ಹೋಗಲ್ಲ. ನಾನು ಸತ್ತರೂ ಇಲ್ಲೇ ಮಣ್ಣಾಗುತ್ತೇನೆ, ಇಲ್ಲೇ ಜಾಗ ಮೀಸಲಿಟ್ಟಿದ್ದೇನೆ. ಚುನಾವಣೆ ವೇಳೆ ನಾನು ಕೊಟ್ಟಿದ್ದ ಹಣವನ್ನು ಕೆಲವರು ಮತದಾರರಿಗೆ ಕೊಟ್ಟಿಲ್ಲ. ಅಂತಹವರು ಹಣ ಇಟ್ಟುಕೊಂಡಿದ್ದರೆ ನಮ್ಮ ಟ್ರಸ್ಟ್ಗೆ ತಂದು ಕೊಡಿ. ನನಗೆ ಆ ಹಣ ಬೇಡ, ಟ್ರಸ್ಟ್ಗೆ ಕೊಡಿ ಸಮಾಜ ಸೇವೆಗೆ ಬಳಸೋಣ ಎಂದು ಆತ್ಮಾವಲೋಕನ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.