ಅಬಕಾರಿ ಸಚಿವ ತಿಮ್ಮಾಪುರಗೆ ಸಂಕಷ್ಟ: ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

Updated on: Jan 19, 2026 | 2:20 PM

ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ವಿರುದ್ಧ ಲಂಚ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಬಾರ್ ಪರವಾನಗಿ ನೀಡಲು ಲಂಚ ಕೇಳಿದ ಆರೋಪವಿದ್ದು, ಯಾದಗಿರಿ ಡಿಸಿ ಜಗದೀಶ್ ನಾಯಕ್ ಆಡಿಯೋ ಆಧರಿಸಿ ದೂರು ನೀಡಲಾಗಿದೆ. ಬಿಜೆಪಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿದ್ದು, ಮುಖ್ಯಮಂತ್ರಿಗಳು ಸಚಿವರಿಂದ ಮಾಹಿತಿ ಕೋರಿದ್ದಾರೆ.

ಬೆಂಗಳೂರು, ಜನವರಿ 19: ಲಂಚ ಪಡೆವಾಗ ಅಬಕಾರಿ ಡಿಸಿ ಜಗದೀಶ್ ನಾಯಕ ಬಂಧನ ಪ್ರಕರಣ ಸಂಬಂಧ ಅಬಕಾರಿ ಸಚಿವ ಆರ್​.ಬಿ.ತಿಮ್ಮಾಪುರಗೂ ಸಂಕಷ್ಟ ಸಾಧ್ಯತೆ ಇದೆ. ಅಬಕಾರಿ ಸಚಿವ ಆರ್​.ಬಿ.ತಿಮ್ಮಾಪುರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಲಕ್ಷ್ಮೀನಾರಾಯಣ ಎಂಬವರು ದೂರು ನೀಡಿದ್ದು, ಪ್ರಕರಣದಲ್ಲಿ ಸಚಿವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಅಬಕಾರಿ ಡಿಸಿ ಜಗದೀಶ್​ ಮಾತಾಡಿದ್ದ ಆಡಿಯೋವನ್ನು ಸಹ ಲಕ್ಷ್ಮೀ ನಾರಾಯಣ ಬಿಡುಗಡೆ ಮಾಡಿದ್ದರು. ಹೀಗಾಗಿ ಸಚಿವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆಯೂ ದೂರಲ್ಲಿ ಆಗ್ರಹಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.