ತುಮಕೂರಿನ ಅಬ್ಕಾರಿ ಅಧಿಕಾರಿಗಳು ತಾವು ವಶಪಡಿಸಿಕೊಂಡಿದ್ದ ನೂರಾರು ಲೀಟರ್ ಮದ್ಯವನ್ನು ನಾಶಮಾಡಿದರು

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ 638 ಲೀಟರ್ ಲಿಕ್ಕರ್ , 79 ಲೀಟರ್ ಬೀಯರ್ ಮತ್ತು ಹೆಂಡದ 123 ಪೌಚ್ ಗಳನ್ನು ನಾಶಪಡಿಸಲಾಯಿತು.

TV9kannada Web Team

| Edited By: Arun Belly

Sep 28, 2022 | 2:58 PM

ತುಮಕೂರು: ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಲಿಕ್ಕರ್ (Liquor), ಬೀಯರ್ (beer) ಮತ್ತು ಹೆಂಡವನ್ನು (toddy) ವಶಪಡಿಸಿಕೊಂಡಿದ್ದ ಅಬಕಾರಿ ಅಧಿಕಾರಿಗಳು ಬುಧವಾರದಂದು ಮಧುಗಿರಿ ಪಟ್ಟಣದ ಹೊರವಲಯದಲ್ಲಿರುವ ಪುರಸಭೆಯ ಕಸ ವಿಲೇವಾರಿ ಘಟಕದ ನಾಶಪಡಿಸಿದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ 638 ಲೀಟರ್ ಲಿಕ್ಕರ್ (ಮದ್ಯ), 79 ಲೀಟರ್ ಬೀಯರ್ ಮತ್ತು ಹೆಂಡದ 123 ಪೌಚ್ ಗಳನ್ನು ನಾಶಪಡಿಸಲಾಯಿತು. ಕಾರ್ಟನ್ ಮತ್ತು ಚೀಲಗಳಲ್ಲಿ ಮದ್ಯದ ಬಾಟಲಿ ಮತ್ತು ಪೌಚ್ ಗಳನ್ನು ತುಂಬಿಸಿಕೊಂಡು ಚೆಲ್ಲಲಾಯಿತು ಮತ್ತು ಪೌಚ್ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ನೆಲಕ್ಕೆ ಹಾಕಿ ಇಲಾಖೆಯ ವಾಹನದ ಮೂಲಕ ಕ್ರಶ್ ಮಾಡಲಾಯಿತು.

Follow us on

Click on your DTH Provider to Add TV9 Kannada