ಸಿದ್ದರಾಮಯ್ಯ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು, 50 ವರ್ಷಗಳಲ್ಲಿ ಯಾರೂ ಮಾಡದ್ದನ್ನು ಮಾಡಿದ್ದೇನೆ ಅನ್ನುತ್ತಾರೆ: ಕೆಎಸ್ ಈಶ್ವರಪ್ಪ

|

Updated on: Sep 04, 2023 | 3:18 PM

ಬಿಜೆಪಿ ಸರಕಾರದಲ್ಲಿ ಶುರುವಾಗಿದ್ದ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದೇ ಸಿದ್ದರಾಮಯ್ಯ ಸರ್ಕಾರದ 100 ದಿನಗಳ ಸಾಧನೆ ಎಂದು ಹೇಳಿದರು. ಸಾಧನೆಗಳ ಬಗ್ಗೆ ಬಿಜೆಪಿ ನಾಯಕರು ಹೇಳುವ ಅಗತ್ಯವೇನೂ ಇಲ್ಲ, ಕಾಂಗ್ರೆಸ್ ಪಕ್ಷದವರೇ ಆಗಿರುವ ಡಿಕೆ ಹರಿಪ್ರಸಾದ್ ) ಮತ್ತು ಬಸವರಾಜ ರಾಯರೆಡ್ಡಿಯನ್ನು ಕೇಳಿದರೆ ಗೊತ್ತಾಗುತ್ತದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು

ಮೈಸೂರು: ಹಿರಿಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳದಿರುವುದು, ಬಿಜೆಪಿ ಸರಕಾರದಲ್ಲಿ ಶುರುವಾಗಿದ್ದ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದೇ ಸಿದ್ದರಾಮಯ್ಯ ಸರ್ಕಾರದ (Siddaramaiah government) 100 ದಿನಗಳ ಸಾಧನೆ ಎಂದು ಹೇಳಿದರು. ಸಾಧನೆಗಳ ಬಗ್ಗೆ ಬಿಜೆಪಿ ನಾಯಕರು ಹೇಳುವ ಅಗತ್ಯವೇನೂ ಇಲ್ಲ, ಕಾಂಗ್ರೆಸ್ ಪಕ್ಷದವರೇ ಆಗಿರುವ ಡಿಕೆ ಹರಿಪ್ರಸಾದ್ (DK Hariprasad) ಮತ್ತು ಬಸವರಾಜ ರಾಯರೆಡ್ಡಿಯನ್ನು ಕೇಳಿದರೆ ಗೊತ್ತಾಗುತ್ತದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಬಹಳ ಸಲೀಸಾಗಿ ಸುಳ್ಳು ಹೇಳುತ್ತಾರೆ, ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ವಿಧಾನ ಪರಿಷತ್ ನಲ್ಲಿ ವಿರೋದ ಪಕ್ಷದ ನಾಯಕನಾಗಿದ್ದ ತಾನು ಒಳ ಮೀಸಲಾತಿ ಸಂಬಂಧಿಸಿದಂತೆ ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೊಳಿಸುವ ಬಗ್ಗೆ ಪ್ರಶ್ನಿಸಿದ್ದಾಗ, ತಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮೊದಲು ಜಾರಿಗೆ ತರೋದಾಗಿ ಅವರು ಹೇಳಿದ್ದರು. ಆ ಅವಧಿ ಮುಗಿದು ಈಗ ಮತ್ತೊಂದು ಅವರಧಿಗೆ ಮುಖ್ಯಮಂತ್ರಿಯಾಗಿದ್ದರೂ ಕಾಂತರಾಜ್ ಆಯೋಗದ ಬಗ್ಗೆ ಚಕಾರವೆತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ