ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್: ಬೆಂಗಳೂರಿನ ಹಲವೆಡೆ ದಾಳಿ

Edited By:

Updated on: Oct 06, 2026 | 1:11 PM

ಬೆಂಗಳೂರು ಸೇರಿ ಹಲವೆಡೆ ನಕಲಿ ಔಷಧ ದಂದೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ಕಿಂಗ್‌ಪಿನ್‌ಗಳ ಮಾಹಿತಿ ಆಧರಿಸಿ, ನಕಲಿ ಔಷಧಿಗಳನ್ನು ವಿತರಿಸಿದ ರಾಜರಾಜೇಶ್ವರಿ ನಗರದ ಆರ್.ಆರ್.ಫಾರ್ಮಾ, ಚಾಮರಾಜಪೇಟೆಯ ಮೆಡಿ 365 ಎಲ್​ಎಲ್​​ಪಿ ಫಾರ್ಮಾ, ತಲಘಟ್ಟಪುರದ ಪಾಟೀಲ್ ಫಾರ್ಮಾ ಸೇರಿದಂತೆ ಹಲವು ಫಾರ್ಮಾಸಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿದ್ದು, ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಬೆಂಗಳೂರು, ಅಕ್ಟೋಬರ್ 6: ನಕಲಿ ಔಷಧ ದಂದೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆಯನ್ನು ತೀವ್ರಗೊಳಿಸಿದೆ. ನಕಲಿ ಔಷಧಿಗಳನ್ನು ಪಡೆದು ವಿತರಿಸುತ್ತಿದ್ದ ಫಾರ್ಮಸಿಗಳಿಗೆ ಎಸ್ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಹಲವು ಫಾರ್ಮಸಿಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಆರ್.ಆರ್.ಫಾರ್ಮಾ, ಚಾಮರಾಜಪೇಟೆಯಲ್ಲಿರುವ ಮೆಡಿ 365 ಎಲ್​ಎಲ್​ಪಿ ಫಾರ್ಮಾ ಹಾಗೂ ತಲಘಟ್ಟಪುರದ ಪಾಟೀಲ್ ಫಾರ್ಮಾ ಮೇಲೆ ಎಸ್ಐಟಿ ದಾಳಿ ನಡೆಸಿದೆ. ಕಿಂಗ್‌ಪಿನ್‌ಗಳಾದ ಪ್ರಶಾಂತ್ ಮತ್ತು ಡಿಸ್ಟ್ರಿಬ್ಯೂಟರ್ ವೀರೇಶ್ ಅವರನ್ನು ವಿಚಾರಣೆಗೊಳಪಡಿಸಿದಾಗ ದೊರೆತ ಮಾಹಿತಿ ಆಧಾರದ ಮೇಲೆ ಈ ದಾಳಿಗಳು ನಡೆದಿವೆ. ಆರೋಪಿಗಳು ನಕಲಿ ಔಷಧಿಗಳನ್ನು ಸಪ್ಲೈ ಮಾಡಿದ ಫಾರ್ಮಸಿಗಳ ಹೆಸರುಗಳನ್ನು ವಿಚಾರಣೆ ವೇಳೆ ಬಹಿರಂಗಪಡಿಸಿದ್ದರು.

ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ ಫಾರ್ಮಸಿ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ಕಿಂಗ್‌ಪಿನ್‌ಗಳು, ನಕಲಿ ಲೇಬಲ್‌ಗಳ ಮೂಲ ಮತ್ತು ವಿತರಣಾ ಜಾಲದ ಬಗ್ಗೆ ಎಸ್ಐಟಿ ತನಿಖೆ ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More