ಹಿರಿಯ ರಾಜಕಾರಣಿ ಡಿವಿ ಸದಾನಂದ ಗೌಡರಿಗೆ ಇಂದು 73ನೇ ಹುಟ್ಟುಹಬ್ಬ ಸಂಭ್ರಮ, ಬೆಂಬಲಿಗರ ಸಡಗರ
ನಮ್ಮ ರಾಜ್ಯದ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ಮಹಿಳಾ ಅಭಿಮಾನಿಗಳು ಜಾಸ್ತಿ ಮಾರಾಯ್ರೇ. ಇದನ್ನು ಯಾಕೆ ಹೇಳ್ತಾ ಇದ್ದೀವಿ ಅಂತ ನಿಮಗೂ ಚೆನ್ನಾಗಿ ಗೊತ್ತು. ಇಲ್ನೋಡಿ, ಸದಾನಂದ ಗೌಡರನ್ನು ಬರ್ತ್ಡೇ ಹಿನ್ನೆಲೆಯಲ್ಲಿ ಅಭಿನಂದಿಸಲು ಅನೇಕ ಮಹಿಳಾ ಬೆಂಬಲಿಗರು ಬಂದಿದ್ದಾರೆ. ಅಭಿಮಾನಿಗಳು ಸದಾನಂದ ಗೌಡ ಮತ್ತು ಅವರ ಧರ್ಮಪತ್ನಿ ಡಾಟಿ ಅವರನ್ನು ಜೊತೆಯಾಗಿ ನಿಲ್ಲಿಸಿ ಹಾರ ಹಾಕಿ ಸಂಭ್ರಮಿಸಿದರು.
ಬೆಂಗಳೂರು, 19 ಮಾರ್ಚ್:ಮಾಜಿ ಮುಖ್ಯಮಂತ್ರಿ, ಮಾಜಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ (former Union Minister) ಹಾಗೂ ಹಿರಿಯ ಬಿಜೆಪಿ ನಾಯಕ ಡಿವಿ ಸದಾನಂದ ಗೌಡ ಅವರಿಗೆ ಇಂದು 73 ನೇ ಹುಟ್ಟುಹಬ್ಬದ ಸಂಭ್ರಮ. ಪಕ್ಷದ ಕಾರ್ಯಕರ್ತರು, ಹಿತೈಶಿಗಳು, ಮತ್ತು ಬೆಂಬಲಿಗರು ಗೌಡರಿಗೆ ವಿಶ್ ಮಾಡಲು ಅವರ ನಿವಾಸಕ್ಕೆ ಲಗ್ಗೆಯಿಟ್ಟರು. ಆದರೆ ತಮ್ಮ ನಾಯಕನಿಗೆ ಈಗ 73ರ ಪ್ರಾಯ ಅನ್ನೋದನ್ನು ಮರೆತ ವಿಶ್ ಮಾಡಲು ಬಂದವರು ನೂಕುನುಗ್ಗಲಿನಲ್ಲಿ ಮತ್ತು ಸೆಲ್ಫೀ, ಪೋಟೋ ತೆಗೆದುಕೊಳ್ಳುವ ಭರದಲ್ಲಿ ಅವರನ್ನು ನೂಕಿಯೇ ಬಿಟ್ಟರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸದಾನಂದಗೌಡರ ಮನೆಯಲ್ಲಿ ಅಶೋಕ, ಬೊಮ್ಮಾಯಿ, ಅಶ್ವಥ್ ಮತ್ತು ಸಿಟಿ ರವಿ ಮೀಟಿಂಗ್!