ಶಿವಕುಮಾರ್ ಮತ್ತು ಸುರೇಶ್ ಅವರಿಗೆ ಹೆಚ್ಐವಿ ಸೋಂಕಿನ ಸೂಜಿ ಚುಚ್ಚುವ ಪ್ರಯತ್ನ ನಡೆದಿತ್ತು: ಡಾ ಹೆಚ್ಡಿ ರಂಗನಾಥ್, ಶಾಸಕ
ತಾನು ಯಾರ ವಿರುದ್ಧವೂ ವೃಥಾ ದೋಷಾರೋಪಣೆ ಮಾಡಲ್ಲ, ಎಲ್ಲ ಶಾಸಕರಿಗೆ ಗೌರವ ನೀಡಿ ಮಾತಾಡುವ ಸಂಸ್ಕೃತಿ ತನ್ನದು ಎಂದು ಡಾ ರಂಗನಾಥ್ ಹೇಳುತ್ತಾರೆ. ಆದರೆ, ಮುನಿರತ್ನ ಮೊದಲಿಂದ ತಮ್ಮ ಕ್ಷೇತ್ರದ ಜನರ ಜೊತೆ ಹೇಗೆ ನಡೆದುಕೊಂಡು ಬಂದಿದ್ದಾರೆ, ಅವರ ವರ್ತನೆ, ನಡಾವಳಿ ಬಗ್ಗೆ ಯಾರಿಗೆ ಗೊತ್ತಿಲ್ಲ? ಅವರ ವಿರುದ್ಧ ಮಾಡಿದ ಅರೋಪಗಳ ಎಫ್ಎಸ್ಎಲ್ ವರದಿ ಕೂಡ ಪಾಸಿಟಿವ್ ಬಂದಿದೆ ಎಂದು ಶಾಸಕ ಹೇಳಿದರು.
ಬೆಂಗಳೂರು, ಮಾರ್ಚ್ 19: ರಾಜಾರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ಡಿಕೆ ಸುರೇಶ್ ಮತ್ತು ಕುಸುಮಾ ಅವರು ತನ್ನ ಕೊಲೆಗೆ ಪ್ರಯತ್ನ ನಡೆಸಿರುವರೆಂದು ಅರೋಪಿಸಿದ್ದಾರೆ. ಅವರ ಆರೋಪಗಳಿಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಹೆಚ್ ಡಿ ರಂಗನಾಥ್, ಮುನಿರತ್ನ ಎಂಥ ವ್ಯಕ್ತಿಯೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ಒಬ್ಬ ಡಾಕ್ಟರ್ ಆಗಿ ತನಗೆ ಅತ್ಯಂತ ಆಶ್ಚರ್ಯ ಹುಟ್ಟಿಸಿದ ಸಂಗತಿಯೆಂದರೆ ಶಿವಕುಮಾರ್, ಸುರೇಶ್ ಮತ್ತು ಕುಸುಮಾ ಅವರಿಗೆ ಹೆಚ್ಐವಿ ಸೋಂಕಿನ ಸಿರಿಂಜ್ ಚುಚ್ಚಲು ಪ್ರಯತ್ನ ನಡೆದಿರೋದು ಅಂತ ಹೇಳುತ್ತಾರೆ. ಯಾರು ಸಿರಿಂಜ್ ಚುಚ್ಚಲು ಪ್ರಯತ್ನಿಸಿದರು ಅನ್ನೋದನ್ನು ರಂಗನಾಥ್ ಸ್ಪಷ್ಟವಾಗಿ ಹೇಳಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಕೇಸ್ಗಳ ತನಿಖೆಗೆ ಸಿದ್ಧವಾಯ್ತು ವಿಶೇಷ ಸಿಐಡಿ ತಂಡ