ಬಿಜೆಪಿ ಶಾಸಕ ಮುನಿರತ್ನ ಕೇಸ್​ಗಳ ತನಿಖೆಗೆ ಸಿದ್ಧವಾಯ್ತು ವಿಶೇಷ ಸಿಐಡಿ ತಂಡ

ಬಿಜೆಪಿ ಶಾಸಕ ಮುನಿರತ್ನ ಈಗಾಗಲೇ ಮೂರ್ಮೂರು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. 2 ಕೇಸ್​ಗಳಿಂದ ಆಚೆ ಬಂದು ಮತ್ತೊಂದ್ರಲ್ಲಿ ಜೈಲು ಪಾಲಾಗಿದ್ದಾರೆ. ಸದ್ಯ ಮುನಿರತ್ನ ವಿರುದ್ಧದ ಕೇಸ್​ಗಳು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಪ್ರಕರಣಗಳ ವಿಶೇಷ ತನಿಖಾ ತಂಡಕ್ಕೆ ಒಟ್ಟು 25 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ನೇಮಕ ಮಾಡಿಕೊಳ್ಳಲಾಗಿದೆ.

ಬಿಜೆಪಿ ಶಾಸಕ ಮುನಿರತ್ನ ಕೇಸ್​ಗಳ ತನಿಖೆಗೆ ಸಿದ್ಧವಾಯ್ತು ವಿಶೇಷ ಸಿಐಡಿ ತಂಡ
ಬಿಜೆಪಿ ಶಾಸಕ ಮುನಿರತ್ನ ಕೇಸ್​ಗಳು ತನಿಖೆಗೆ ರಚನೆಯಾಗಿರುವ ಸಿಐಡಿ ತಂಡ ಹೇಗಿದೆ ನೋಡಿ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on:Sep 23, 2024 | 9:26 PM

ಬೆಂಗಳೂರು, ಸೆಪ್ಟೆಂಬರ್​ 23: ಇಂದು ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಶಾಸಕನಿಗೆ ನಿರಾಸೆಯಾಗಿದೆ. ಮತ್ತೊಂದು ಕಡೆ ಮುನಿರತ್ನ (Munirathna) ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಮುನಿರತ್ನ ವಿರುದ್ಧದ ಕೇಸ್​ಗಳು ಸಿಐಡಿಗೆ ವರ್ಗಾವಣೆ ಹಿನ್ನೆಲೆ ಪ್ರಕರಣಗಳ ವಿಶೇಷ ತನಿಖಾ ತಂಡಕ್ಕೆ ಒಟ್ಟು 25 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ನೇಮಕ ಮಾಡಿಕೊಳ್ಳಲಾಗಿದೆ.

ಓರ್ವ ಎಸಿಪಿ, ಇಬ್ಬರು ಡಿಎಸ್​ಪಿ, ಓರ್ವ ಮಹಿಳಾ ಪಿಐ ಸೇರಿ ನಾಲ್ವರು ಇನ್ಸ್ ಪೆಕ್ಟರ್​ಗಳು, ಮೂವರು ಪಿಎಸ್ಐ ಹಾಗೂ ಇಬ್ಬರು ಎಎಸ್, ಓರ್ವ ಮಹಿಳಾ ಹೆಚ್​ಸಿ ಸೇರಿ ಮೂವರು ಹೆಚ್​ಸಿ ಹಾಗೂ ಇಬ್ಬರು ಪಿಸಿ, ಮೂವರು ಆರ್​​ಹೆಚ್​ಸಿ, ಮೂವರು ಆರ್​ಪಿಸಿ, ಇಬ್ಬರು ಮಹಿಳಾ ಆರ್​ಪಿಸಿ. ಸಿಸಿಬಿ ಎಸಿಪಿ ಧರ್ಮೆಂದ್ರ, ಡಿಎಸ್.ಪಿ.ರವಿಕುಮಾರ್, ಡಿಎಸ್​ಪಿ ಕವಿತಾ, ಪಿಐ ಗಳಾದ ಸುನೀಲ್, ಬಾಲರಾಜ್, ಅವಿನಾಶ್​ರನ್ನು ಸರ್ಕಾರ ನೇಮಕ ಮಾಡಿದೆ.

ಇದನ್ನೂ ಓದಿ: ಮುನಿರತ್ನಗೆ ಬಿಗ್ ಶಾಕ್: ಶಾಸಕ ಸ್ಥಾನದಿಂದ ಅಮಾನತುಗೊಳಿಸುವಂತೆ ಸ್ಪೀಕರ್​ಗೆ ಕಾನೂನು ಸಚಿವ ಪತ್ರ

ಇನ್ನು ಮುನಿರತ್ನ ವಿರುದ್ದ ದಾಖಲಾದ ಪ್ರಕರಣಗಳ ತನಿಖೆ ಸಂಬಂಧ ಇತ್ತೀಚೆಗೆ ಸರ್ಕಾರ ಎಸ್​ಐಟಿ ರಚನೆ ಮಾಡಿತ್ತು. ಸೆಷ್ಟೆಂಬರ್ 21 ರಂದು ಮುಖ್ಯಸ್ಥರಾಗಿ ಬಿ.ಕೆ‌.ಸಿಂಗ್ ನೇತೃತ್ವದಲ್ಲಿ ನೇಮಕ ಮಾಡಿ ತನಿಖಾ ತಂಡ ರಚನೆ ಮಾಡಿ ಸರ್ಕಾರ ಆದೇಶಸಿತ್ತು.

ಬಿಜೆಪಿ ಶಾಸಕ ಮುನಿರತ್ನ ಈಗಾಗಲೇ ಮೂರ್ಮೂರು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. 2 ಕೇಸ್​ಗಳಿಂದ ಆಚೆ ಬಂದು ಮತ್ತೊಂದ್ರಲ್ಲಿ ಜೈಲು ಪಾಲಾಗಿದ್ದಾರೆ. ಇಷ್ಟಾದರೂ ಬಿಜೆಪಿ ಶಾಸಕನ ಬೆಂಬಲಿಗರು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರಂತೆ. ಹೀಗಾಗಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಹಾಗೂ ದಲಿತರ ಮುಖಂಡರು ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ. ಪೊಲೀಸರಿಗೆ ಹೇಳಿ ಕ್ರಮ ಕೈಗೊಳ್ಳೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರಂತೆ.

ಇದನ್ನೂ ಓದಿ: ಮುನಿರತ್ನ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ಇನ್ಸ್​​ಪೆಕ್ಟರ್​​ ವಿರುದ್ಧ ಸಿಎಂಗೆ ವೇಲು ದೂರು

ಇನ್ನು ಮುನಿರತ್ನ ವಿರೋಧಿಗಳನ್ನ ಹಣಿಯೋದಕ್ಕೆ ಹೆಚ್​ಐವಿ ಹರಡಿಸುವ ಯತ್ನ ಮಾಡುತ್ತಿದ್ದರು ಅನ್ನೋದು ಬಯಲಾಗಿದೆ. ಈ ಬಗ್ಗೆ ಖುದ್ದು ಸಂತ್ರಸ್ತ್ರೆ ದೂರಿನಲ್ಲಿ ಉಲ್ಲೇಖಿಸಿದ್ದರು. ಇದೇ ವಿಚಾರವಾಗಿ ಇವತ್ತು ಕುಣಿಗಲ್​ನ ಕಾಂಗ್ರೆಸ್ ಶಾಸಕ ರಂಗನಾಥ್ ಸುದ್ದಿಗೋಷ್ಠಿ ನಡೆಸಿದ್ದರು. ಅಶೋಕ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಲಿ ಅಂತಾ ಸಲಹೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:23 pm, Mon, 23 September 24