ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
Shiva Rajkumar: ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವಣ್ಣ ಚಿಕಿತ್ಸೆಯ ಬಳಿಕ ಇಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಶಿವರಾಜ್ ಕುಮಾರ್ ಸ್ವಾಗತಕ್ಕೆ ಕೆಲವು ದಿನ ಮುಂಚೆಯಿಂದಲೇ ಸಿದ್ಧತೆ ನಡೆಸಿದ್ದ ಅಭಿಮಾನಿಗಳು ನಿರೀಕ್ಷೆಯಂತೆ ಅದ್ಧೂರಿಯಾಗಿ ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ. ಏರ್ಪೋರ್ಟ್ ಟೋಲ್ ಬಳಿ ಆಪಲ್ ಹಾರ ಹಾಕಿ ಶಿವಣ್ಣನನ್ನು ಸ್ವಾಗತಿಸಿದ್ದಾರೆ.
ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ನಟ ಶಿವರಾಜ್ ಕುಮಾರ್ ಒಂದು ತಿಂಗಳ ಬಳಿಕ ಇಂದು (ಜನವರಿ 26) ರಾಜ್ಯಕ್ಕೆ ಮರಳಿದ್ದಾರೆ. ಗುಣಮುಖರಾಗಿ ಮರಳಿದ ಶಿವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಶಿವಣ್ಣನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹಲವು ಸಿನಿಮಾ ಸೆಲೆಬ್ರಿಟಿಗಳು, ಆಪ್ತರು, ಕುಟುಂಬದವರು ಆಗಮಿಸಿದ್ದರು. ವಿಮಾನ ನಿಲ್ದಾಣದ ಬಳಿಯ ಟೋಲ್ ಗೇಟ್ನಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಆಪಲ್ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಶಿವಣ್ಣ ಸಹ ಕಾರು ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ್ದಾರೆ. ಸ್ವಾಗತ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ಮಾನ್ಯತಾ ಟೆಕ್ ಪಾರ್ನ್ನ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 26, 2025 10:37 AM