ಮಂಡ್ಯ: ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡಗೆ ತರಾಟೆಗೆ ತೆಗೆದುಕೊಂಡ ಪ್ರತಿಭಟನಾ ನಿರತ ರೈತರು

| Updated By: ವಿವೇಕ ಬಿರಾದಾರ

Updated on: Nov 19, 2022 | 7:28 PM

ಕಬ್ಬು ದರ, ಹಾಲಿನ ದರವನ್ನು ಹೆಚ್ಚಸಿವಂತೆ ಕಳೆದ 13 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಡ್ಯ: ಕಬ್ಬು ದರ, ಹಾಲಿನ ದರವನ್ನು ಹೆಚ್ಚಸಿವಂತೆ ಕಳೆದ 13 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಇಂದು (ನ.19) ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ​​ ಭೇಟಿ ನೀಡಿದ್ದರು. ಈ ವೇಳೆ ರೈತರು ನಾರಾಯಣಗೌಡರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕಬ್ಬು ಬೆಳೆಯುವುದು ಎಷ್ಟು ಕಷ್ಟ ಅಂತ ನಿಮಗೇನು ಗೊತ್ತು.? ಸರ್ಕಾರದ ಪರ ಇದ್ದಿರಿ, ಹೀಗಾಗಿ ನಿಮಗೆ ಮಾತನಾಡಲು ಸಾಧ್ಯವಾಗಲ್ಲ. 18 ತಿಂಗಳಾದರೂ ರೈತರಿಗೆ ಕಬ್ಬು ಕಟಾವು ಮಾಡೋಕೆ ಆಗುತ್ತಿಲ್ಲ. ಮೈಶುಗರ್ ಕಾರ್ಖಾನೆ ಪ್ರಾರಂಭವಾಗಿದೆ. ಎಷ್ಟೋ ಬಾರಿ ರೈತರು ಧರಣಿ ಮಾಡಿ ಮನವಿ ಕೊಟ್ಟರು. ಮನವಿಯನ್ನು ಕಸದ ಬುಟ್ಟಿಗೆ ಹಾಕಿದ್ದೀರಿ. ರೈತರ ಕಷ್ಟ ಕೇಳುವವರು ಯಾರು ಸರ್ ಎಂದು ಪ್ರಶ್ನೆ ಮಾಡಿದ್ದಾರೆ.

ರೈತರು ಧರಣಿಗೆ ಕುಳಿತಿದ್ದಾಗ ಬರ್ತಿರಿ ಅಷ್ಟೇ. ರೈತರ ಪರವಾಗಿ ಏನು ಕೆಲಸ ಮಾಡಿದ್ದಿರಿ? ಭರವಸೆ ಕೊಟ್ಟು ಹೋದರೆ ಬರವಸೆ ಈಡೇರುತ್ತಾ ಹೇಳಿ ಸರ್. ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಸರ್ ಎಂದು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published on: Nov 19, 2022 07:24 PM