ಇದೇನಿದು ಬಂದೂಕು ಹಿಡಿದು ದಾಳಿಂಬೆ ತೋಟ ಕಾಯುವ ಪರಿಸ್ಥಿತಿ ಬಂದುಬಿಟ್ಟಿತೇ ರೈತನಿಗೆ!? ದಾಳಿಂಬೆಗೆ ಬಂದಿದೆ ಚಿನ್ನದ ಬೆಲೆ
ಸೊಂಪಾಗಿ ಮನೆಯಲ್ಲಿ ನಿದ್ದೆ ಮಾಡಬೇಕಿದ್ದ ರೈತರು, ರಾತ್ರಿ ಹೊತ್ತಲ್ಲಿ ಕೈಯಲ್ಲಿ ಬಂದೂಕು, ಲಾಂಗ್ ಮಚ್ಚು, ಕಾರದ ಪುಡಿಗಳನ್ನು ಹಿಡಿದು ದಾಳಿಂಬೆ ತೋಟ ಕಾಯುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ, ಅಂದರ್ಲಹಳ್ಳಿ ಹಾಗೂ ಚದಲಪುರದ ಬಳಿ ಇರುವ ತೋಟಗಳಲ್ಲಿ. ಹೌದು!! ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ದಾಳಿಂಬೆಗೆ ಚಿನ್ನದ ಬೆಲೆ ಬಂದಿದೆ, ಗುಣಮಟ್ಟದ ಕೆ.ಜಿ ದಾಳಿಂಬೆ 150 ರೂಪಾಯಿ ಬೆಲೆಗೆ ಮಾರಾಟವಾಗ್ತಿದೆ. ಇದ್ರಿಂದ ಕಳ್ಳರ ಕಣ್ಣು ರೈತರ ದಾಳಿಂಬೆ ತೋಟದ ಮೇಲೆ ಬಿದ್ದಿದೆ. ಇದ್ರಿಂದ ಬೇಸತ್ತ ರೈತರು ಸ್ವತಃ ತಾವೆ ತೋಟಕ್ಕೆ ಕಾವಲು ಕಾಯುತ್ತಿದ್ದಾರೆ.
ಟೊಮ್ಯಾಟೊಗೆ ಚಿನ್ನದ ಬೆಲೆ ಇರುವಾಗ ಟೊಮ್ಯಾಟೊ ತೋಟಕ್ಕೆ ನುಗ್ಗಿ ಟೊಮ್ಯಾಟೊ ಕಳ್ಳತನ ಮಾಡ್ತಿದ್ದ ಕಳ್ಳರ ಕಣ್ಣು, ಈಗ ಚಿನ್ನದ ಬೆಲೆ ಇರುವ ದಾಳಿಂಬೆ ತೋಟದ ಮೇಲೆ ಬಿದ್ದಿದೆ. ರಾತ್ರೊರಾತ್ರಿ.. ಬೆಳೆದು ನಿಂತಿದ್ದ ದಾಳಿಂಬೆ ತೋಟಗಳಿಗೆ (pomegranate gardens) ನುಗ್ಗುತ್ತಿರುವ ಕಳ್ಳರು (thief) ದಾಳಿಂಬೆ ಕದ್ದು ರೈತರ ಕಣ್ಣಲ್ಲಿ ನೀರು ಹಾಕಿಸುತ್ತಿದ್ದಾರೆ. ಇದ್ರಿಂದ ಬೇಸತ್ತ ರೈತರು ರಾತ್ರಿಯಾದ್ರೆ ಸಾಕು ಕೈಯಲ್ಲಿ ಬಂದೂಕು (gun), ಮಚ್ಚು, ಕಾರದ ಪುಡಿಯನ್ನು ಹಿಡಿದು ತೋಟಗಳ ಕಾವಲು ಕಾಯುತ್ತಿದ್ದಾರೆ. ಈ ಕುರಿತು ಒಂದು ವರದಿ. ಸೊಂಪಾಗಿ ಮನೆಯಲ್ಲಿ ನಿದ್ದೆ ಮಾಡಬೇಕಿದ್ದ ರೈತರು, ರಾತ್ರಿ ಹೊತ್ತಲ್ಲಿ ಕೈಯಲ್ಲಿ ಬಂದೂಕು, ಲಾಂಗ್ ಮಚ್ಚು, ಕಾರದ ಪುಡಿಗಳನ್ನು ಹಿಡಿದು ದಾಳಿಂಬೆ ತೋಟ ಕಾಯುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ (farmers in chikkaballapur) ನಾಯನಹಳ್ಳಿ, ಅಂದರ್ಲಹಳ್ಳಿ ಹಾಗೂ ಚದಲಪುರದ ಬಳಿ ಇರುವ ತೋಟಗಳಲ್ಲಿ. ಹೌದು!! ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ದಾಳಿಂಬೆಗೆ ಚಿನ್ನದ ಬೆಲೆ ಬಂದಿದೆ, ಗುಣಮಟ್ಟದ ಕೆ.ಜಿ ದಾಳಿಂಬೆ 150 ರೂಪಾಯಿ ಬೆಲೆಗೆ ಮಾರಾಟವಾಗ್ತಿದೆ. ಇದ್ರಿಂದ ಕಳ್ಳರ ಕಣ್ಣು ರೈತರ ದಾಳಿಂಬೆ ತೋಟದ ಮೇಲೆ ಬಿದ್ದಿದೆ, ಪ್ರತಿದಿನ ಒಂದಿಲ್ಲೊಂದು ಕಡೆ ತೋಟಗಳಿಗೆ ನುಗ್ಗುತ್ತಿರುವ ಕಳ್ಳರು ಗಿಡದಲ್ಲಿದ್ದ ದಾಳಿಂಬೆಯನ್ನು ಕಳ್ಳತನ ಮಾಡ್ತಿದ್ದಾರೆ. ಇದ್ರಿಂದ ಬೇಸತ್ತ ರೈತರು ಈಗ ಸ್ವತಃ ತಾವೆ ತೋಟಕ್ಕೆ ಕಾವಲು ಕಾಯುತ್ತಿದ್ದಾರೆ.
ಇನ್ನು ನಾಯನಹಳ್ಳಿ ಗ್ರಾಮದ ವಿದ್ಯಾವಂತ ರೈತ ಚಂದನ್, ತನ್ನ ಎರಡು ಎಕರೆ ಜಮೀನಿನಲ್ಲಿ 5 ಲಕ್ಷ ರೂಪಾಯಿ ಬಂಡವಾಳ ಹಾಕಿ ದಾಳಿಂಬೆ ಬೆಳೆದಿದ್ದಾನೆ. ಮೊನ್ನೆ ಇವರ ತೋಟಕ್ಕೆ ನುಗ್ಗಿರುವ ಕಳ್ಳರು ಒಮದು ಟನ್ ನಷ್ಟು ಹಣ್ಣು ಕಟಾವು ಮಾಡಿದ್ದಾರೆ, ಮತ್ತೊಂದೆಡೆ ಚಂದನ್ ತೋಟದ ಬಳಿ ಇರುವ ದೇವರಾಜ್ ತೋಟಕ್ಕೂ ನುಗ್ಗಿರುವ ಖದೀಮರು… ಅವರ ತೋಟದಲ್ಲಿಯೂ ಒಂದು ಟನ್ ನಷ್ಟು ದಾಳಿಂಬೆ ಕಳ್ಳತನ ಮಾಡಿದ್ದಾರೆ.
ಕಳೆದ ಒಂದು ವಾರದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಾಯನಹಳ್ಳಿ, ಅಂದರ್ಲಹಳ್ಳಿ ಹಾಗೂ ಚದಲಪುರ ನಂದಿಕ್ರಾಸ್ ಗಳ ಬಳಿ ಕೆಲವು ತೋಟಗಳಲ್ಲಿ ದಾಳಿಂಬೆ ಕಳ್ಳತನ ಮಾಡಿದ್ದಾರೆ. ಇದ್ರಿಂದ ರೋಸಿ ಹೋಗಿರುವ ಚದಲಪುರದ ಪ್ರಗತಿಪರ ರೈತ ಮುನಿರಾಜು… ಬಂದು ಬಳಗವನ್ನು ಮನೆಗೆ ಕರೆಸಿಕೊಂಡಿದ್ದು ರಾತ್ರಿಯಾದ್ರೆ ಸಾಕು… ಬಂದೂಕು, ಕಾರದ ಪುಡಿ ಕೈಲ್ಲಿ ಹಿಡಿದು ತನ್ನ ಆರು ಎಕರೆ ದಾಳಿಂಬೆ ತೋಟ ಕಾಯುತ್ತಿದ್ದಾರೆ.
ದಾಳಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೆ. ರೈತರು ಈ ವರ್ಷವೂ ಒಳ್ಳೆ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ. ಆದ್ರೆ ರಾತ್ರೊರಾತ್ರಿ ತೋಟಕ್ಕೆ ನುಗ್ಗುತ್ತಿರುವ ಕಳ್ಳರು, ರೈತರ ಶ್ರಮವನ್ನು ಕಳ್ಳತನ ಮಾಡ್ತಿದ್ದಾರೆ. ಕಳ್ಳರು ರೈತರ ಕೈಗೆ ಸಿಕ್ಕಿ ಬಿದ್ರೆ ಅಷ್ಟೆ ಕಥೆ, ರೈತರು ಎಲ್ಲದಕ್ಕೂ ಸನ್ನದ್ದರಾಗಿ ತೋಟ ಕಾಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ