ಬಾರದ ಮಳೆ: ವರುಣದೇವನ ಮೊರೆ ಹೋದ ತುಮಕೂರು ರೈತರು

ಬಾರದ ಮಳೆ: ವರುಣದೇವನ ಮೊರೆ ಹೋದ ತುಮಕೂರು ರೈತರು

ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ

Updated on: Aug 21, 2023 | 8:54 AM

ಮಳೆರಾಯ ಮತ್ತೆ ಕೃಪೆ ತೋರಪ್ಪ.. ಬೆಳೆಗಳಿಗೆ ನೀರುಣಿಸಪ್ಪ ಅಂತ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಮಿಡಿಗೇಶಿ ಸಮೀಪದ ಲಕ್ಲಿಹಟ್ಟಿ ರೈತರು ವರುಣದೇವನಲ್ಲಿ ಪಾರ್ಥಿಸಿದ್ದಾರೆ.

ತುಮಕೂರು: ಜುಲೈ ಆರಂಭದ ತಿಂಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗಿ (Rain) ರೈತರ ಮೊಗದಲ್ಲಿ ಸಂತಸ ಮೂಡಿಸಿತ್ತು. ರೈತರು ಬೆಳೆಗಳನ್ನು ಬಿತ್ತಿದ್ದಾರೆ. ಆದರೆ ಇದೀಗ ಕಳೆದ 20 ದಿನಗಳಿಂದ ಮಳೆಯಾಗಿಲ್ಲ. ಇದರಿಂದ ಹೊಲ, ಗದ್ದೆಗಳಿಗೆ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ರೈತ ತಲೆ ಮೇಲೆ ಕೈಹೊತ್ತು ಕುಂತಿದ್ದಾನೆ. ಹೀಗಾಗಿ ಮಳೆರಾಯ ಮತ್ತೆ ಕೃಪೆ ತೋರಪ್ಪ.. ಬೆಳೆಗಳಿಗೆ ನೀರುಣಿಸಪ್ಪ ಅಂತ ತುಮಕೂರು (Tumakuru) ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಮಿಡಿಗೇಶಿ ಸಮೀಪದ ಲಕ್ಲಿಹಟ್ಟಿ ರೈತರು ವರುಣದೇವನಲ್ಲಿ ಪಾರ್ಥಿಸಿದ್ದಾರೆ. ಬೆಳೆದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರು ಮಳೆರಾಯನಿಗೆ ಮೊರೆ ಹೋಗಿದ್ದಾರೆ. ಮಳೆರಾಯನ ಮಣ್ಣಿನ ಆಕೃತಿ ಮಾಡಿ ಬಾರಯ್ಯ ಮಳೆರಾಯ ಎಂದು ಪೂಜೆ ಮಾಡಿದ್ದಾರೆ. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಳೆರಾಯನ ಹೊತ್ತು ಮೆರವಣಿಗೆ ಮಾಡಿದ್ದಾರೆ.