ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ದೇವನಹಳ್ಳಿಯಲ್ಲಿ ಪ್ರತಿಭಟನೆಗಿಳಿದ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 17, 2022 | 10:48 AM

ವಿಡಿಯೊನಲ್ಲಿ ಪೊಲೀಸ್ ಆಧಿಕಾರಿಯೊಬ್ಬರು ಪ್ರತಿಭಟನೆ ನಡೆಸಲು ನಿಮಗೆ ಅನುಮತಿ ನೀಡಿಲ್ಲ ಎಂದು ಜೋರಾಗಿ ಕಿರುಚುತ್ತಿರುವುದು ಕೇಳಿಸುತ್ತದೆ. ಹಲವಾರು ರೈತ ಮಹಿಳೆಯರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Devanahalli: ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ (protest) ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ತಡೆದು ಬಸವಳಿದಿದ್ದ ಬೆಂಗಳೂರಿನ ಪೊಲೀಸರಿಗೆ ಶುಕ್ರವಾರ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯನ್ನು (land acquisition process) ವಿರೋಧಿಸಿ ದೇವನಹಳ್ಳಿ ಬಸ್ ನಿಲ್ದಾಣದ ಪ್ರತಿಭಟನೆಗಿಳಿದ ರೈತರ ಆಕ್ರೋಶವನ್ನು (farmers ire) ಎದುರಿಸಬೇಕಾಯಿತು. ಉಗ್ರಸ್ವರೂಪರಾಗಿ ಪ್ರತಿಭಟನೆಗಿಳಿದಿದ್ದ ರೈತರು ತಮ್ಮ ಮುಷ್ಕರವನ್ನು ತಡೆಯಲಾರಂಭಿಸಿದ ಪೊಲೀಸರ ವಿರುದ್ಧ ವಾಗ್ದಾಳಿಗಿಳಿದರು. ವಿಡಿಯೊನಲ್ಲಿ ಪೊಲೀಸ್ ಆಧಿಕಾರಿಯೊಬ್ಬರು ಪ್ರತಿಭಟನೆ ನಡೆಸಲು ನಿಮಗೆ ಅನುಮತಿ ನೀಡಿಲ್ಲ ಎಂದು ಜೋರಾಗಿ ಕಿರುಚುತ್ತಿರುವುದು ಕೇಳಿಸುತ್ತದೆ. ಹಲವಾರು ರೈತ ಮಹಿಳೆಯರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.