ರಾಯಚೂರಲ್ಲಿ ಜನಪ್ರಿಯ ಬ್ರ್ಯಾಂಡ್ ಗಳ ಕೃತ್ರಿಮ ಉತ್ಪಾದನೆಗಳನ್ನು ತಯಾರಿಸಿ ಮಾರುತ್ತಿದ್ದ ಜಾಲ ಪೊಲೀಸರ ಬಲೆಗೆ

ರಾಯಚೂರಲ್ಲಿ ಜನಪ್ರಿಯ ಬ್ರ್ಯಾಂಡ್ ಗಳ ಕೃತ್ರಿಮ ಉತ್ಪಾದನೆಗಳನ್ನು ತಯಾರಿಸಿ ಮಾರುತ್ತಿದ್ದ ಜಾಲ ಪೊಲೀಸರ ಬಲೆಗೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 17, 2022 | 11:50 AM

ಸಿರವಾರ ಪೊಲೀಸರು ಶುಕ್ರವಾರ ಅವನ ಗೋದಾಮಿನ ಮೇಲೆ ದಾಳಿ ನಡೆಸಿ ಈ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸೂತ್ರಧಾರಿಯ ಪತ್ತೆಗೆ ಜಾಲ ಬೀಸಲಾಗಿದೆ.

Raichur: ಇಲ್ಲಿರುವ ವಸ್ತುಗಳನ್ನು ನೋಡಿ ಮಾರಾಯ್ರೇ. ಒಂದು ಕ್ಷಣ ನೀವು ಸಹ ಇವು ಒರಿಜಿನಲ್ ಉತ್ಪಾದನೆಗಳು ಅಂತ ಬೇಸ್ತು ಬೀಳುವ ಸಾಧ್ಯತೆಯಿದೆ. ಆದರೆ ಇವೆಲ್ಲ ಕೃತ್ರಿಮ ಪ್ರಾಡಕ್ಟ್ಗಳು (fake products). ಒರಿಜಿನಲ್ ಬ್ರ್ಯಾಂಡ್ಗಳ ಮುದ್ರೆ, ಪ್ಯಾಕಿಂಗ್ ಬಳಸಿ ರಾಯಚೂರು ಜಿಲ್ಲೆ ಸಿರವಾರ ಬಳಿಯಿರುವ ಬಾಲಾಜಿ ಕ್ಯಾಂಪಿನಲ್ಲಿ (Balaji Camp) ಹೈದರಾಬಾದ (Hyderabad) ಮೂಲದ ವ್ಯಕ್ತಿಯೊಬ್ಬ ನಕಲಿ ರೆಡ್ ಲೇಬಲ್ ಚಹಾಪುಡಿ, ಫೆವಿಫಿಕ್ಸ್, ಪ್ಯಾರಾಚೂಟ್ ಎಣ್ಣೆ ಮೊದಲಾದ ಪದಾರ್ಥಗಳನ್ನು ತಯಾರಿಸಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅವುಗಳನ್ನು ಮಾರಾಟ ಮಾಡುವ ಜಾಲದ ಸೂತ್ರಧಾರಿ. ಸಿರವಾರ ಪೊಲೀಸರು ಶುಕ್ರವಾರ ಅವನ ಗೋದಾಮಿನ ಮೇಲೆ ದಾಳಿ ನಡೆಸಿ ಈ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಸೂತ್ರಧಾರಿಯ ಪತ್ತೆಗೆ ಜಾಲ ಬೀಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.