AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಾದ್ಯಂತ ಎಸಿಬಿ ದಾಳಿ: ಕೆಲ ಅಧಿಕಾರಿಗಳಿಗೆ ಶುಕ್ರವಾರದ ಬೆಳಗು ‘ಗುಡ್ ಮಾರ್ನಿಂಗ್’ ಆಗಲಿಲ್ಲ!

ರಾಜ್ಯಾದ್ಯಂತ ಎಸಿಬಿ ದಾಳಿ: ಕೆಲ ಅಧಿಕಾರಿಗಳಿಗೆ ಶುಕ್ರವಾರದ ಬೆಳಗು ‘ಗುಡ್ ಮಾರ್ನಿಂಗ್’ ಆಗಲಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 17, 2022 | 12:58 PM

Share

ದಾಳಿಗಳಲ್ಲಿ 300 ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆಂದು ನಮಗೆ ಗೊತ್ತಾಗಿದೆ. ಎಸಿಬಿ ದಾಳಿಗೀಡಾಗಿರುವ ಕೆಲ ಮನೆ-ಬಂಗ್ಲೆಗಳನ್ನು ವಿಡಿಯೋನಲ್ಲಿ ನೋಡಬಹುದು.

ಶುಕ್ರವಾರ ನಸುಕಿನ ಜಾವದಲ್ಲೇ ಕಾರ್ಯೋನ್ಮುಖರಾದ ಎಸಿಬಿ ಅಧಿಕಾರಿಗಳು (ACB officials) ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯದಾದ್ಯಂತ 80 ಕಡೆ ದಾಳಿ ನಡೆಸಿದ್ದಾರೆ. ಬಲ್ಲ ಆದಾಯಕ್ಕಿಂತ (income from known sources) ಆಧಿಕ ಪ್ರಮಾಣದಲ್ಲಿ ಆಸ್ತಿಪಾಸ್ತಿ, ಹಣ ಹೊಂದಿರುವ ಒಟ್ಟು 21 ಅಧಿಕಾರಿಗಳ (officials) ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು ಎಸಿಬಿ ಅಧಿಕಾರಿಗಳು ಅವರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಗಳಲ್ಲಿ 300 ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆಂದು ನಮಗೆ ಗೊತ್ತಾಗಿದೆ. ಎಸಿಬಿ ದಾಳಿಗೀಡಾಗಿರುವ ಕೆಲ ಮನೆ-ಬಂಗ್ಲೆಗಳನ್ನು ವಿಡಿಯೋನಲ್ಲಿ ನೋಡಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.