ನೆಚ್ಚಿನ ಶಿಕ್ಷಕರ ವರ್ಗಾವಣೆ; ನಮ್ಗೆ ಅದೇ ಟೀಚರ್ಸ್ ಬೇಕೆಂದು ಕಣ್ಣೀರಿಟ್ಟ ವಿದ್ಯಾರ್ಥಿಗಳು
ಜಿಲ್ಲೆಯ ಪಾವಗಡ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ವರ್ಗಾವಣೆಗೊಂಡ ನೆಚ್ಚಿನ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಕಂಬನಿ ಮಿಡಿದ ಘಟನೆ ನಡೆದಿದೆ.
ತುಮಕೂರು: ಜಿಲ್ಲೆಯ ಪಾವಗಡ(Pavagada) ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ವರ್ಗಾವಣೆಗೊಂಡ ನೆಚ್ಚಿನ ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಕಂಬನಿ ಮಿಡಿದ ಘಟನೆ ನಡೆದಿದೆ. ಮಮತ ಹಾಗೂ ಮಂಜುನಾಥ್ ಎಂಬ ಶಿಕ್ಷಕರು(Teachers) ಪಾವಗಡದ ಚಿಕ್ಕನಾಯಕನಹಳ್ಳಿಯ ಸರ್ಕಾರಿ ಹಿರಿಯ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇಬ್ಬರೂ ಶಿಕ್ಷಕರನ್ನ ವರ್ಗಾವಣೆ ಮಾಡಿದ ಹಿನ್ನಲೆ ಪಾವಗಡದ ಬಿಇಒ ಕಚೇರಿ ಮುಂದೆ ನೆಚ್ಚಿನ ಶಿಕ್ಷಕರಿಗಾಗಿ ಗ್ರಾಮಸ್ಥರು ಸೇರಿದಂತೆ ಮಕ್ಕಳು ಪ್ರತಿಭಟನೆ ನಡೆಸಿದ ಮನಕಲುಕುವ ಘಟನೆ ನಡೆದಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ