Uttara Kannada News: ದೂಧ್ ಸಾಗರ್‌ಗೆ ಟ್ರೆಕ್ಕಿಂಗ್ ತೆರಳಿದ ಯುವಕರಿಗೆ ಬಸ್ಕಿ ಹೊಡೆಸಿದ ಪೊಲೀಸ್; ವಿಡಿಯೋ ವೈರಲ್
ಪ್ರವಾಸಿಗರೇ ದೂದ್ ಸಾಗರ್‌ಗೆ ಟ್ರೆಕ್ಕಿಂಗ್ ತೆರಳುವ ಮುನ್ನ ಈ ವಿಡಿಯೋ ನೋಡುವುದು ಒಳ್ಳೆಯದು. ಜಿಟಿಜಿಟಿ ಮಳೆಯಲ್ಲಿ ಪ್ರಕೃತಿ ಆನಂದಿಸಲು ಹೋದ ಯುವಕರಿಗೆ ರೈಲ್ವೇ ಪೊಲೀಸ್ ಹಾಗೂ ಗೋವಾ ಪೊಲೀಸರು ಟ್ರೆಕ್ಕಿಂಗ್(Trekking ) ಬಂದ ಯುವಕರಿಗೆ ಬಸ್ಕಿ ಹೊಡೆಸಿದ ಘಟನೆ ನಡೆದಿದೆ.
ಉತ್ತರ ಕನ್ನಡ: ಪ್ರವಾಸಿಗರೇ ದೂದ್ ಸಾಗರ್‌ಗೆ ಟ್ರೆಕ್ಕಿಂಗ್ ತೆರಳುವ ಮುನ್ನ ಈ ವಿಡಿಯೋ ನೋಡುವುದು ಒಳ್ಳೆಯದು. ಜಿಟಿಜಿಟಿ ಮಳೆಯಲ್ಲಿ ಪ್ರಕೃತಿ ಆನಂದಿಸಲು ಹೋದ ಯುವಕರಿಗೆ ರೈಲ್ವೇ ಪೊಲೀಸ್ ಹಾಗೂ ಗೋವಾ ಪೊಲೀಸರು ಟ್ರೆಕ್ಕಿಂಗ್(Trekking ) ಬಂದ ಯುವಕರಿಗೆ ಬಸ್ಕಿ ಹೊಡೆಸಿದ ಘಟನೆ ನಡೆದಿದೆ. ಬೆಳಗಾವಿ, ಬಾಗಲಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ಗೋವಾ ಬಾರ್ಡರ್ ಮೂಲಕ ರೈಲ್ವೇ ಟ್ರ್ಯಾಕ್ ಮೇಲೆ ನಡೆದುಕೊಂಡು ಸಾಗಿದ್ದ ನೂರಾರು ಯುವಕರಿಗೆ ಅರ್ಧದಲ್ಲೇ ನಿಲ್ಲಿಸಿ, ಬಸ್ಕಿ ಹೊಡೆಸಿ ವಾಪಾಸ್ ಕಳುಹಿಸಿದ್ದಾರೆ.
ಇಂದಿನಿಂದ ದೂಧ್ ಸಾಗರ್‌ಗೆ ತೆರಳದಂತೆ ಅಧಿಕೃತವಾಗಿ ಬ್ಯಾನ್ ಮಾಡಿರುವ ಗೋವಾ ಸರ್ಕಾರ
ದೂಧ್ ಸಾಗರ್‌ಗೆ ತೆರಳದಂತೆ ಇಂದಿನಿಂದ ಗೋವಾ ಸರಕಾರ ಅಧಿಕೃತವಾಗಿ ಬ್ಯಾನ್ ಮಾಡಿದೆ. ಹೌದು ಭಾರೀ ಪ್ರಮಾಣದಲ್ಲಿ ಪ್ರವಾಸಿಗರ ಭೇಟಿ ಹಾಗೂ ಮಳೆಗಾಲದ ಹಿನ್ನೆಲೆ ಸುರಕ್ಷತೆ ಕಾರಣ ಬ್ಯಾನ್ ಮಾಡಲಾಗಿದ್ದು, 50ಕ್ಕೂ ಹೆಚ್ಚು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ರೈಲ್ವೇ ಸಿಬ್ಬಂದಿಯನ್ನು ಗೋವಾ ಸರಕಾರ ಸ್ಥಳದಲ್ಲಿ ನಿಯೋಜನೆ ಮಾಡಿದೆ. ಗೋವಾದಿಂದ ಅನುಮತಿ ನೀಡಿದಲ್ಲಿ ಮಾತ್ರ ದೂದ್ ಸಾಗರ್‌ಗೆ ಟ್ರೆಕ್ಕಿಂಗ್ ತೆರಳಲು ಅನುಮತಿ ದೊರೆಯಲಿದ್ದು, ಇನ್ನು ಬನಹಟ್ಟಿಯಿಂದ ಬಂದವರನ್ನು ಲೋಂಡಾ ಮೂಲಕ ವಾಪಾಸ್ ಹೋಗುವಂತೆ ಸೂಚನೆ ನೀಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ