ಗದಗ: ಸಾರಿಗೆ ಬಸ್​ ಕಿಟಕಿ ಮೇಲೆ ಕುಳಿತು ಅಪಾಯಕಾರಿ ಪ್ರಯಾಣ ಮಾಡಿದ ಮಹಿಳೆ

ಗದಗ: ಸಾರಿಗೆ ಬಸ್​ ಕಿಟಕಿ ಮೇಲೆ ಕುಳಿತು ಅಪಾಯಕಾರಿ ಪ್ರಯಾಣ ಮಾಡಿದ ಮಹಿಳೆ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi

Updated on: Jul 16, 2023 | 5:05 PM

ಕುಳಿತುಕೊಳ್ಳಲು ಜಾಗವಿಲ್ಲದೆ ಮಹಿಳೆಯೊಬ್ಬರು ವಾಯುವ್ಯ ಸಾರಿಗೆ ಬಸ್​ನ ಕಿಟಿಯಲ್ಲಿ ಕುಳಿತುಕೊಂಡು ಅಪಾಯಕಾರಿಯಾಗಿ ಪ್ರಯಾಣಿಸಿದ ಘಟನೆ ಗದಗದಲ್ಲಿ ನಡೆದಿದೆ.

ಗದಗ, ಜುಲೈ 16: ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ (Shakti Scheme) ಜಾರಿ ನಂತರ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರ ಹವಾ ಸೃಷ್ಟಿಯಾಗಿದೆ. ಹೆಚ್ಚಿನ ಬಸ್​ಗಳಲ್ಲಿ ಫುಲ್ ರಶ್ ಆಗಿ ಸಂಚರಿಸುತ್ತಿವೆ. ಅದರಂತೆ ಗದಗದಲ್ಲೂ ಸಾರಿಗೆ ಬಸ್​ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕುಳಿತುಕೊಳ್ಳಲು ಜಾಗವಿಲ್ಲದೆ ಮಹಿಳೆಯೊಬ್ಬರು ವಾಯುವ್ಯ (NWKRTC) ಬಸ್​ನ ಕಿಟಕಿ ಮೇಲೆ ಕುಳಿತುಕೊಂಡು ಪ್ರಯಾಣಿಸಿದ್ದಾರೆ. ಗದಗ ನಗರದಿಂದ ಹುಲಕೋಟಿ ಗ್ರಾಮಕ್ಕೆ ತೆರಳುವ ಬಸ್​ನಲ್ಲಿ ಈ ರೀತಿ ಪ್ರಯಾಣ ಮಾಡಲಾಗಿದೆ. ಈ ರೀತಿಯ ಪ್ರಯಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಿಟಿಕಿಯಿಂದ ಹೊರಗಡೆ ಬಿಳುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೆ, ಓವರ್ ಟೇಕ್ ಮಾಡುವಾಗ ಬೇರೊಂದು ವಾಹನ ಸೊಂಟಕ್ಕೆ ಹೊಡೆಯುವ ಸಾಧ್ಯತೆಯೂ ಹೆಚ್ಚು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ