Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್​ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ

Konkan Railway: ದೇಶದ ಮನಮೋಹಕ ಜಲಪಾತಗಳಲ್ಲಿ ಒಂದಾಗಿರುವ ದೂಧ್​ಸಾಗರ್ ಮುಂದೆ ರೈಲೊಂದು ಕೆಲ ಸಮಯದವರೆಗೆ ನಿಲ್ಲುವ ಪರಿಸ್ಥಿತಿ ಬಂದಿದೆ. ಮಾಂಡೊವಿ ನದಿಯ ನೀರು ಹೆಚ್ಚಾದ ಕಾರಣ ಈ ಪರಿಸ್ಥಿತಿ ಉಂಟಾಗಿದ್ದು ರೈಲ್ವೆ ಇಲಾಖೆ ವಿಡಿಯೊ ಹಂಚಿಕೊಂಡಿದೆ.

Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್​ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ
ಸಾಂದರ್ಭಿಕ ಚಿತ್ರ
Follow us
| Updated By: shivaprasad.hs

Updated on: Jul 29, 2021 | 2:13 PM

ದೂಧ್​ಸಾಗರ್ ಜಲಪಾತದ ಎದುರಿನಿಂದ ಹಾದುಹೋಗುವ ಕೊಂಕಣ ಮಾರ್ಗದ ರೈಲೊಂದು ಜಲಪಾತದ ನೀರು ಜಾಸ್ತಿಯಾಗಿದ್ದರಿಂದ ಅದರ ಎದುರೇ ನಿಂತಿದೆ. ಮಾಂಡೊವಿ ನದಿಯಿಂದ ಉಂಟಾದ ದೂಧ್​ಸಾಗರ್​ ಜಲಪಾತದ ನೀರು ವಿಪರೀತ ಹೆಚ್ಚಾಗಿ ರೈಲ್ವೆ ಹಳಿಗಳ ಬಳಿ ಬೀಳುತ್ತಿದ್ದುದರಿಂದ ರೈಲು ನಿಂತಿತ್ತು. ಇದನ್ನು ರೈಲ್ವೆ ಇಲಾಖೆ ಹಂಚಿಕೊಂಡಿರುವ ವಿಡಿಯೊದಲ್ಲಿ ನೋಡಬಹುದು. 

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣದಿಂದ ಮಾಂಡೊವಿ ನದಿ ತುಂಬಿ ಹರಿಯುತ್ತಿದೆ. ದೂಧ್​ಸಾಗರ್ ಜಲಪಾತ ಅದರಿಂದಲೇ ಸೃಷ್ಟಿಯಾಗಿದ್ದು ಹಲವು ಧಾರೆಗಳಲ್ಲಿ ಬಹಳ ಎತ್ತರದಿಂದ ಕಣಿವೆಗೆ ಧುಮ್ಮಿಕ್ಕುತ್ತದೆ. ಅದರ ಎದುರಲ್ಲೇ ರೈಲ್ವೆ ಹಳಿ ಹಾದು ಹೋಗಿದ್ದು ವಿಪರೀತ ಮಳೆಯಿಲ್ಲದಾಗ ಜಲಪಾತ ಅದ್ಭುತವಾಗಿ ಕಾಣುತ್ತದೆ. ಆದರೆ ಈಗ ಮಳೆ ಹೆಚ್ಚಾಗಿರುವುದರಿಂದ ಮತ್ತು ಗಾಳಿಯ ರಭಸಕ್ಕೆ ರೈಲ್ವೆ ಹಳಿಯ ಮೇಲೆ ನೀರು ಬೀಳುತ್ತಿದೆ. ಇದರಿಂದಾಗಿ ರೈಲು ಕೆಲ ಕಾಲ ಅಲ್ಲೇ ನಿಂತು ನಂತರ ಮುಂದೆ ತೆರಳಿದೆ.

ಪ್ರಸಾರ ಭಾರತಿ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ವಿಡಿಯೊ ಇಲ್ಲಿದೆ:

ಗೋವಾ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮಾರ್ಗದಲ್ಲಿ ದೂದ್​ಸಾಗರ್​ ಜಲಪಾತವಿದೆ. ಮಾನ್ಸೂನ್ ಸಂದರ್ಭದಲ್ಲಿ ಈ ಜಲಪಾತ ಹಾಲಿನ ಸಮುದ್ರದಂತೆ ಕಾಣುವುದರಿಂದ ದೂಧ್​ಸಾಗರ್​ ಎಂಬ ಹೆಸರು ಬಂದಿದೆ. ಈ ಜಲಪಾತದ ಸುತ್ತಲೂ ರಕ್ಷಿತಾರಣ್ಯವಿದ್ದು ಅಮೂಲ್ಯವಾದ ಜೀವ ವೈವಿಧ್ಯವನ್ನು ಹೊಂದಿದೆ. ಮಾಂಡೊವಿ ನದಿಯು ಭಗವಾನ್ ಮಹಾವೀರ ಅರಣ್ಯ ಮತ್ತು ಮೊಳ್ಳೆಮ್ ರಾಷ್ಟ್ರೀಯ ಉದ್ಯಾನವನದ ನಡುವಲ್ಲಿ ಹರಿದು ಅಲ್ಲಿನ ಜೀವ ವೈವಿಧ್ಯಕ್ಕೆ ಆಸರೆಯಾಗಿದೆ. ಮಾಂಡೊವಿ ನದಿ ಹುಟ್ಟುವುದು ಕರ್ನಾಟಕದ ಬೆಳಗಾವಿಯಲ್ಲಿ. ನಂತರ ಅದು ಗೋವಾದ ರಾಜಧಾನಿ ಪಣಜಿಯಲ್ಲಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ.

ದೂಧ್ ಸಾಗರ್ ಜಲಪಾತ ಭಾರತದ ಎತ್ತರದ ಜಲಪಾತಗಳಲ್ಲಿ ಒಂದಾಗಿದ್ದು ಸುಮಾರು 310 ಮೀಟರ್ ಎತ್ತರದಿಂದ ಧುಮುಕುತ್ತದೆ. ಇದರ ವಿಸ್ತಾರವೂ ದೊಡ್ಡದಾಗಿದ್ದು ಸುಮಾರು ಮೂವತ್ತು ಮೀಟರ್ ಅಗಲವಿದೆ. ಈ ಭಾಗದಲ್ಲಿ ಇನ್ನು ಮೂರು ದಿನಗಳ ಕಾಲ ವಿಪರೀತ ಮಳೆಯಾಗುವ ಸಂಭವವಿದ್ದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಇದನ್ನೂ ಓದಿ: Video: ಕಾಲಿನ ಸ್ವಾಧೀನ ಕಳೆದುಕೊಂಡ ಮಗ ‘ಅಪ್ಪಾ, ನಾನೂ ಎಲ್ಲರಂತೆ ನಡೆಯಬೇಕು…’ ಎಂದಾಗ ಇಂಜಿನಿಯರ್ ತಂದೆ ಮಾಡಿದ್ದೇನು?

ಇದನ್ನೂ ಓದಿ: Viral Video: ಯಮಹಾ ಬೈಕ್​ ಓಡಿಸಿ ಕ್ಯಾಮರಾಕ್ಕೆ ಪೋಸ್​ ಕೊಟ್ಟ ವೃದ್ದೆ! ಯುವಕರೆಲ್ಲಾ ಬೆರಗಾಗುವ ವಿಡಿಯೋವಿದು​

(a train was stopped in front of Dudhsagar waterfalls due to heavy rain fall and railway department shares the video)

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್